ದೇಶ ರಕ್ಷಣೆಗೆ ಆರೆಸ್ಸೆಸ್ ವಿರುದ್ಧ ಆಂದೋಲನ ನಡೆಸಲು ಕಾಂಗ್ರೆಸ್ ಕರೆ

Update: 2021-08-09 17:47 GMT

ಮಂಗಳೂರು, ಆ.9: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರನ್ನು ಬೆಂಬಲಿಸಿದ್ದ ಆರೆಸ್ಸೆಸ್ ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದಿದೆ. ಅದರ ದುಷ್ಪರಿಣಾಮ ದೇಶದ ಭವಿಷ್ಯದ ಮೇಲಾಗುತ್ತಿದೆ. ದೇಶದಲ್ಲಿ ಧರ್ಮದ ಆಧಾರದಲ್ಲಿ ಆಡಳಿತ ನಡೆಸುವ ಮೂಲಕ ಮನುವಾದಿಯ ಸಾಮಾಜಿಕ ಅಸಮಾನತೆಯ, ಆರ್ಥಿಕ ಸ್ವಾತಂತ್ರ್ಯ ನಿರಾಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಆರೆಸ್ಸೆಸ್ಸ್ ಮತ್ತದರ ಮಂಚೂಣಿ ಸಂಘಟನೆಗಳ ಹಿಡನ್ ಅಜೆಂಡಾವನ್ನು ಬಿಜೆಪಿಯ ಮೂಲಕ ಜಾರಿ ಮಾಡಲಾಗುತ್ತಿದೆ. ಹಾಗಾಗಿ ದೇಶದ ಅಖಂಡತೆ, ಜನರ ಹಿತದೃಷ್ಟಿಯಿಂದ ಆರೆಸೆಸ್ ವಿರುದ್ಧ ಆಂದೋಲನಕ್ಕೆ ಕಾಂಗ್ರೆಸ್ಸಿಗರು ಸಜ್ಜಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಕರೆ ನೀಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶದಲ್ಲೇ ಅತಿ ದೊಡ್ಡ ಸ್ವಾತಂತ್ರ್ಯ ಹೋರಾಟ ಅದಾಗಿತ್ತು. ಮಹಾತ್ಮ ಗಾಂಧೀಜಿ, ನೆಹರೂ, ಪಟೇಲ್ ಸೇರಿದಂತೆ ಸಾವಿರಾರು ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಹಾಕಿದರೂ ಕೂಡ ಸ್ವಯಂ ಸ್ಪೂರ್ತಿಯಿಂದ ಕೋಟ್ಯಾಂತರ ಮಂದಿ ಭಾರತೀಯರು ಕ್ವಿಟ್ ಇಂಡಿಯಾದಲ್ಲಿ ಭಾಗವಹಿಸಿದ್ದರು. ಹಲವು ಮಂದಿ ಕಾಂಗ್ರೆಸ್ ಹೋರಾಟಗಾರರ ಬಲಿದಾನವಾಗಿದೆ. ಅಂದಿನ ಹೋರಾಟದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ಸೇವಾದಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆರೆಸ್ಸೆಸ್‌ನವರು ಮಾತ್ರ ಬ್ರಿಟಷರ ಗುಲಾಮರಾಗಿ ಕೆಲಸ ಮಾಡಿದ್ದರು ಎಂದು ಮೋಹನ್ ಹೇಳಿದರು.

ಡಿಸಿಸಿ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಆಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಜಿಲ್ಲಾ ಸಹಕಾರಿ ಘಟಕದ ಅಧ್ಯಕ್ಷ ಸುದರ್ಶನ್ ಜೈನ್, ಸಾಮಾಜಿಕ ಜಾಲತಾಣದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿತ್ಯಾನಂದ ಶೆಟ್ಟಿ, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಟಿ.ಕೆ. ಸುಧೀರ್, ನೀರಜ್ ಪಾಲ್, ಸಿ.ಎಂ. ಮುಸ್ತಫಾ, ನಝೀರ್ ಬಜಾಲ್, ಮಾಜಿ ಮೇಯರ್‌ಗಳಾದ ಹರಿನಾಥ್, ಮಹಾಬಲ ಮಾರ್ಲ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್‌ಗಳಾದ ಅಪ್ಪಿ, ಶಂಶುದ್ದೀನ್ ಬಂದರ್, ಶೋಭಾ ಕೇಶವ, ಭಾಸ್ಕರ್ ರಾವ್, ಪದ್ಮನಾಭ ಅಮೀನ್, ಟಿ.ಕೆ. ಶೈಲಜಾ, ಮುಖಂಡರುಗಳಾದ ಟಿ. ಹೊನ್ನಯ್ಯ, ಶೇಖರ್ ಬೆಂಗ್ರೆ, ದುರ್ಗಪ್ರಸಾದ್, ಸಂತೋಷ್ ಭಂಡಾರಿ ಚಿಲ್ಮಿತ್ತಾರ್, ರಮಾನಂದ ಪೂಜಾರಿ, ಎನ್‌ಎಸ್‌ಯುಐ ಜಿಲ್ಲಾ ಕಾರ್ಯಾಧ್ಯಕ್ಷ ಪವನ್ ಸಾಲಿಯಾನ್, ಥೆರೆಸಾ ಪಿಂಟೋ, ಯೋಗೀಶ್ ನಾಯಕ್, ಲಕ್ಷಣ್ ಶೆಟ್ಟಿ, ಅಬ್ದುಲ್ ಸಲೀಂ ಪಾಂಡೇಶ್ವರ, ಫಯಾಝ್ ಅಮ್ಮೆಮ್ಮಾರ್, ಯುವ ಕಾಂಗ್ರೆಸ್‌ನ ಸರ್ಫ್ರಾಝ್ ನವಾಝ್, ಎಸ್.ಕೆ. ಸೌಹಾನ್, ಸಮರ್ಥ್ ಭಟ್, ಉದಯ ಕುಂದರ್, ಮುಹಮ್ಮದ್ ಬಪ್ಪಳಿಗೆ, ಚೇತನ್ ಬೆಂಗ್ರೆ, ಭುವನ್ ಡಿ. ಕರ್ಕೇರ, ಜಾರ್ಜ್ ಟಿ. ವರ್ಗೀಸ್, ಭರತೇಶ್ ಅಮೀನ್, ಯಶವಂತ್ ಶಕ್ತಿನಗರ ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ವಂದಿಸಿದರು. ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News