ಕಾರ್ಕಳ : ಎಸೆಸೆಲ್ಸಿ ಪರೀಕ್ಷೆ ಒಟ್ಟಿಗೆ ಬರೆದಿದ್ದ ತಾಯಿ-ಮಗ

Update: 2021-08-11 17:14 GMT

ಕಾರ್ಕಳ : ಎಸೆಸೆಲ್ಸಿ ಪರೀಕ್ಷೆ ಒಟ್ಟಿಗೆ ಬರೆದಿದ್ದ ಕಾರ್ಕಳ ತಾಲೂಕು ತೆಳ್ಳಾರು ಮಿತ್ತಬೆಟ್ಟುವಿನ ತಾಯಿ-ಮಗ ಇಬ್ಬರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ದುರ್ಗಾ ತೆಳ್ಳಾರಿನ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿ ವಿಕ್ರಂ 559 ಅಂಕ ಪಡೆಯುವುದರೊಂದಿಗೆ ಡಿಸ್ಟಿಂಕ್ಷನ್‌ ನಲ್ಲಿ ತೇರ್ಗಡೆಯಾಗಿದ್ದರೆ ತಾಯಿ ಲತಾ ಅವರಿಗೆ 458 ಅಂಕ ದೊರೆತಿದೆ. ಸಂಸ್ಥೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲತಾ ಅವರ ಶಿಕ್ಷಣ ಮೊಟಕುಗೊಂಡಿದ್ದ ಕಾರಣ ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು.

ನೆರವಾಯಿತು ಆನ್‌ಲೈನ್‌ ಕ್ಲಾಸ್‌ 

ಕೋವಿಡ್‌ ಕಾರಣದಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ನೀಡಲಾಗುತ್ತಿತ್ತು. ವಿಕ್ರಂಗೆ ಶಿಕ್ಷಕರು ಆನ್‌ ಲೈನ್‌ ಕ್ಲಾಸ್‌ ನೀಡುತ್ತಿದ್ದ ಸಂದರ್ಭ ತಾಯಿ ಲತಾ ಅವರು ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದರು.

ಮಗನಲ್ಲಿ ಕೇಳಿ ಕಲಿಯುತ್ತಿದ್ದೆ

ಎಸೆಸೆಲ್ಸಿ ಪರೀಕ್ಷೆ ಬರೆಯಲು ಮಗನ ಆನ್‌ಲೈನ್‌ ಕ್ಲಾಸ್‌ ನನಗೆ ಸಹಕಾರಿಯಾಗಿದೆ. ಅರ್ಥವಾಗದ ವಿಷಯ ಕುರಿತು ಮಗನೊಂದಿಗೆ ಚರ್ಚೆ ಮಾಡುತ್ತಿದ್ದೆ.  ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಗಂಡ ಹಾಗೂ ತೆಳ್ಳಾರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸ್ಮಿತಾ ಹಾಗೂ ಶಿಕ್ಷಕ ವೃಂದದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಲತಾ ಹೇಳಿದ್ದಾರೆ.

ತಾಯಿ-ಮಗ ಎಸೆಸೆಲ್ಸಿ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸಿದ್ದರು.  ಇದೀಗ ಅವರು ಪಡೆದಿರುವ ಫಲಿತಾಂಶ ನೋಡಿ ಬಹಳ ಖುಷಿಯಾಗಿದೆ ಎಂದು ಕಾರ್ಕಳದ ಖ್ಯಾತ ಛಾಯಾಗ್ರಾಹಕರಾಗಿರುವ ರಾಮಕೃಷ್ಣ ಪೂಜಾರಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News