ಎಸಿಪಿ ಪಿ.ಎ. ಹೆಗಡೆ ಸಹಿತ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಯ ಪುರಸ್ಕಾರಕ್ಕೆ ಆಯ್ಕೆ

Update: 2021-08-12 14:14 GMT

ಮಂಗಳೂರು, ಆ.12: ಮಂಗಳೂರು ಸೆಂಟ್ರಲ್ ವಿಭಾಗದ ಎಸಿಪಿ ಆಗಿರುವ ಪಿ.ಎ. ಹೆಗಡೆ ಸೇರಿದಂತೆ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಗೃಹ ಇಲಾಖೆಯಿಂದ ಅತ್ಯುತ್ತಮ ಅಪರಾಧ ಪತ್ತೆ ತನಿಖಾಧಿಕಾರಿಗಳಿಗೆ ಕೊಡಮಾಡುವ ಎಕ್ಸಲೆನ್ಸಿ ಇನ್ವೆಸ್ಟಿಗೇಶನ್ ಅವಾರ್ಡ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಮಂಗಳೂರು ಸೆಂಟ್ರಲ್ ಎಸಿಪಿ ಪರಮೇಶ್ವರ ಅನಂತ ಹೆಗಡೆ, ಬೆಂಗಳೂರು ಸಿಸಿಬಿ ಎಸಿಪಿ ಎಚ್.ಎಂ. ಧರ್ಮೇಂದ್ರ, ಎಸ್‌ಟಿಎಫ್ ಡಿವೈಎಸ್ಪಿ ಬಾಲಕೃಷ್ಣ, ಎಸ್‌ಐಟಿ ಇನ್‌ಸ್ಪೆಕ್ಟರ್ ಮನೋಜ್ ಎನ್. ಹೊನವಾಳೆ, ದಾವಣಗೆರೆ ಹೊನ್ನಾಳಿ ಸರ್ಕಲ್ ಇನ್‌ಸ್ಪೆಕ್ಟರ್ ದೇವರಾಜು, ಹುಬ್ಬಳ್ಳಿಯ ಇನ್‌ಸ್ಪೆಕ್ಟರ್ ಶಿವಪ್ಪ ಕಮಟಗಿ ಈ ಮಹತ್ವದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬಂದರು ಠಾಣೆಯಲ್ಲಿ ಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದ ಪಿ.ಎ. ಹೆಗಡೆ ಅವರು ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿ ಪಡೆದು ಮೂಲ್ಕಿ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದರು. 2008ರಲ್ಲಿ ಮೂಲ್ಕಿ ಠಾಣಾಧಿಕಾರಿಯಾಗಿದ್ದಾಗ ಪಿ.ಎ. ಹೆಗಡೆ ಅವರು ಯಾವುದೇ ಸುಳಿವು ಇಲ್ಲದ ಪ್ರಕರಣವೊಂದನ್ನು ಪತ್ತೆ ಮಾಡಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಪುರಸ್ಕಾರ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News