ಕೋಟ ಗ್ರಾಪಂಗೆ ನೂತನ ಧ್ವಜಸ್ತಂಭ ಕೊಡುಗೆ

Update: 2021-08-15 16:19 GMT

ಕೋಟ, ಆ.15: ಕೋಟ ಗ್ರಾಮ ಪಂಚಾಯತ್ಗೆ ಮಣೂರು ಬಾಳೆಬೆಟ್ಟಿನ ದಾನಿ ಬಿ.ಎನ್.ಮಮ್ತಾಜ್ ಅಲಿ ಕೊಡಮಾಡಿದ ನೂತನ ಧ್ವಜ ಸ್ತಂಭವನ್ನು ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸುವ ಮೂಲಕ ಅನಾವರಣಗೊಳಿಸ ಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ರಾಮಣ್ಣ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News