ಫರಂಗಿಪೇಟೆ ವಿವಿಧೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

Update: 2021-08-16 05:49 GMT

ಸುಜೀರ್ ಪ್ರೌಢ ಶಾಲೆ ಮಾರಿಪಳ್ಳ

ಬಂಟ್ವಾಳ, ಆ.16: ತಾಲೂಕಿನ ಮಾರಿಪಳ್ಳ ಸುಜೀರ್ ಪ್ರೌಢ ಶಾಲೆಯಲ್ಲಿ ರವಿವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಧ್ವಜಾರೋಹಣಗೈದು ಮಾತನಾಡಿದರು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್, ಭಾಸ್ಕರ್ ರೈ, ಕಿಶೋರ್, ಇಶಾಂ ಫರಂಗಿಪೇಟೆ, ಶಾಲೆಯ ಮುಖ್ಯ ಶಿಕ್ಷಕಿ ಶಶಿಮಂಗಳ ಮೊದಲಾದವರು ಉಪಸ್ಥಿತರಿದ್ದರು.


ಪುದು ಮಾಪಿಲ ಸರಕಾರಿ ಶಾಲೆ

ಪುದು ಮಾಪಿಲ ಸರಕಾರಿ ಶಾಲೆಯಲ್ಲಿ ರವಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಧ್ವಜಾರೋಹಣಗೈದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ರಮ್ಲಾನ್ ಕುಂಪನಮಜಲು, ಮಜೀದ್ ಫರಂಗಿಪೇಟೆ, ಅಬೂಬಕ್ಕರ್ ಫರಂಗಿಪೇಟೆ ಮೊದಲಾದವರು ಉಪಸ್ಥಿತರಿದ್ದರು.


ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ

ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ರವಿವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಮಸೀದಿಯ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಧ್ವಜಾರೋಹಣ ಮಾಡಿ ಮಾತನಾಡಿದರು.

ಮಸೀದಿಯ ಖತೀಬ್ ಅಬ್ಬಾಸ್ ದಾರಿಮಿ, ಆಡಳಿತ ಮಂಡಳಿಯ ಖಜಾಂಚಿ ಮಜೀದ್ ಫರಂಗಿಪೇಟೆ ಸಹಿತ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News