ಕೊಣಾಜೆ: ಪಜೀರು ರಹ್ಮಾನ್ ಜುಮಾ ಮಸೀದಿ ವಠಾರದಲ್ಲಿ 75ನೇ ಸ್ವಾತಂತ್ರೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Update: 2021-08-16 10:51 GMT

ಕೊಣಾಜೆ: ರಹ್ಮಾನ್ ಜುಮಾ‌ ಮಸೀದಿ ಪಜೀರು ಹಾಗೂ ಜಮೀಯತುತ್ತುಲಬ ಫ್ರೆಂಡ್ಸ್ ಅಸೋಸಿಯೇಷನ್ ಇದರ ಸಂಯುಕ್ತ ಆಶ್ರಯದಲ್ಲಿ  75ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿ ವಠಾರದಲ್ಲಿ ಆಚರಿಸಲಾಯಿತು.

 ಜಮಾ‌ಅತ್ ಅಧ್ಯಕ್ಷ ಅಬ್ದುರ್ರಝಾಕ್ ಧ್ವಜಾರೋಹಣಗೈದು   ಸ್ವಾತಂತ್ರ್ಯದ  ಸಂದೇಶ ನೀಡಿದರು. 

ಮಸೀದಿ ಖತೀಬರಾದ ಇಬ್ರಾಹಿಂ ದಾರಿಮಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮತ್ತು ಹೋರಾಡಿದವರಲ್ಲಿ  ದೊಡ್ಡ ಸಂಖ್ಯೆಯ ಮುಸಲ್ಮಾನರಿದ್ದಾರೆ,ಇತಿಹಾಸ ತಿರುಚಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅದನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯವಾಗಿದೆ‌. ಹಿರಿಯರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ಈ‌ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಮೀಯತುತ್ತುಲಬ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಮದ್ರಸಾ ವಿದ್ಯಾರ್ಥಿಗಳಿಗಾಗಿ  ಆಯೋಜಿಸಲಾಗಿದ್ದ ಅಂತರ್ ಮದ್ರಸ  ಪ್ರಬಂಧ ಹಾಗು ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.   ಸಮಾರಂಭದಲ್ಲಿ ಪಜೀರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಫೀಕ್ ಪಜೀರ್, ಸದಸ್ಯರಾದ ಇಂತಿಯಾಝ್, ಜೆ.ಎಫ್. ಎ ಅಧ್ಯಕ್ಷರಾದ ನಾಸಿರ್ ಪಜೀರ್ ಮದ್ರಸ ಅಧ್ಯಾಪಕರಾದ  ಅಬ್ದುಲ್ ಖಾದರ್ ಬೆಳ್ಮ ಮತ್ತು ಅಬ್ದುಲ್ ಕಾದರ್ ದಾರಿಮಿ ಮುಡಿಪು, ಮಸೀದಿ ಆಡಳಿತ ಸಮಿತಿ ಸದಸ್ಯರಾದ ಹಮೀದ್ ಪಜೀರ್, ಹಸನ್ ಬಾವ , ಬಶೀರ್ ಪಜೀರ್, ಇಬ್ರಾಹಿಂ ಪಾಡಿ, ಅಬ್ದುಲ್ ಖಾದರ್ ಸಣ್ಣಪದವು, ಸಿ.ಎಚ್.ಮೊಯ್ದಿನ್ ಕುಂಞಿ ಮುಂತಾದವರು ಉಪಸ್ಥಿತರಿದ್ದರು.

ಲೇಖಕ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜೆ.ಎಫ್.ಎ ಕಾರ್ಯದರ್ಶಿ ಅಶ್ರಪ್ ಅಚ್ಚು  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News