ಕಣ್ಣೂರು: ಮಹಿಳಾ ಶರೀಅತ್ ಕಾಲೇಜು ಲೋಕಾರ್ಪಣೆ

Update: 2021-08-16 16:33 GMT

ಮಂಗಳೂರು, ಆ.16: ಕಣ್ಣೂರಿನಲ್ಲಿ ಮಹಿಳಾ ಶರೀಅತ್ ಕಾಲೇಜನ್ನು ಸಮಸ್ತ ಕೇಂದ್ರ ಮುಷಾವರ ಸದಸ್ಯ ಶೈಖುನಾ ಬಿ.ಕೆ. ಅಬ್ದುಲ್ ಕಾದರ್ ಅಲ್ ಖಾಸಿಮಿ ಲೋಕಾರ್ಪಣೆಗೊಳಿಸಿದರು.

ಪ್ರಸಕ್ತ ವರ್ಷದಿಂದಲೇ ಪಿಯು ವಿದ್ಯಾರ್ಥಿಗಳಿಗೆ ಶರೀಅತ್ ವಿದ್ಯಾಭ್ಯಾಸ ಆರಂಭವಾಗಿದೆ. ಪಿಯುಸಿಯೊಂದಿಗೆ ಶರೀಅತ್ ಕಲಿಯಲು ಇಚ್ಚಿಸುವವರಿಗೆ ಕುರ್‌ಆನ್, ಹದೀಸ್, ಕರ್ಮಶಾಸ್ತ್ರ, ಚರಿತ್ರೆ, ಅರಬಿಕ್ ವ್ಯಾಕರಣ ಶಾಸ್ತ್ರಗಳನ್ನೊಳಗೊಂಡ ಎರಡು ವರ್ಷದ ಆಲಿಮತ್ ಕೋರ್ಸ್‌ಗೆ ಚಾಲನೆ ನೀಡಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಉಪಾಧ್ಯಕ್ಷ ಹಾಜಿ ಅಬ್ದುಲ್ ರ್ರಹ್ಮಾನ್ ವಹಿಸಿದ್ದರು. ಉಸ್ತಾದ್ ಕೆ.ಎಸ್. ಹೈದರ್ ದಾರಿಮಿ ಮುಖ್ಯ ಭಾಷಣಗೈದರು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಆಗಮಿಸಿದ್ದರು.

ಶರೀಅತ್ ವಿಭಾಗದ ಮುಖ್ಯಸ್ಥ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಕಾಲೇಜಿನ ಪ್ರಧಾನ ಕಾರ್ಯದರ್ಶಿ ಉಮರಬ್ಬ, ಅಲ್‌ಬಿರ್ರ್‌ ಕರ್ನಾಟಕ ಉಸ್ತುವಾರಿ ಅಕ್ಬರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ ಸ್ವಾಗತಿಸಿದರು. ಕಾಲೇಜಿನ ಕಾರ್ಯ ನಿರ್ವಾಹಕ ರಿಯಾಝ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News