‘ಟೀಂ ಸುಫಿಯಾನ’ ಉಳ್ಳಾಲ ತಂಡಕ್ಕೆ ಚಾಲನೆ

Update: 2021-08-19 16:44 GMT
ಜವಾದ್ ತಂಙಳ್

ಮಂಗಳೂರು, ಆ.19: ಉಳ್ಳಾಲದ ಖಾಝಿಯಾಗಿ, ಸಯ್ಯಿದ್ ಮದನಿ ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿ ‘ಉಳ್ಳಾಲ ತಂಙಳ್’ ಎಂದೇ ಪ್ರಸಿಧ್ಧರಾದ ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ತಂಙಳ್‌ರ ಧಾರ್ಮಿಕ-ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳ ಡಾಟಾವನ್ನು ಸಂಗ್ರಹಿಸುವ ಸಲುವಾಗಿ ಪ್ರಾರಂಭಿಸಿರುವ Tajululama.com ವೆಬ್ಸೈಟಿಗೆ ಚರಿತ್ರೆ ಸಂಗ್ರಹಿಸುವ ನಿಮಿತ್ತ ‘ಟೀಂ ಸುಫಿಯಾನ’ ಎಂಬ ತಂಡಕ್ಕೆ ಉಳ್ಳಾಲ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಉಳ್ಳಾಲ ಮಾಸ್ತಿಕಟ್ಟೆಯ ನಾಲೆಡ್ಜ್ ಸೆಂಟರ್‌ನಲ್ಲಿ ಚಾಲನೆ ನೀಡಿದರು.

ಟೀಂ ಸುಫಿಯಾನ ಉಳ್ಳಾಲ ಇದರ ಅಧ್ಯಕ್ಷರಾಗಿ ಜವಾದ್ ತಂಙಳ್ ಅಳೇಕಲ, ಸಂಚಾಲಕರಾಗಿ ಉಮರುಲ್ ಫಾರೂಕ್ ಬೊಟ್ಟು, ಕೋಶಾಧಿಕಾರಿಯಾಗಿ ನಿಝಾಮುದ್ದೀನ್ ಶಾ ಕೊಟೇಪುರ ಅವರನ್ನು ಆಯ್ಕೆ ಮಾಡಲಾಯಿತು.

ಫೋಕಸ್ ಗ್ರೂಪ್‌ನ ಸದಸ್ಯರಾಗಿ ಮನ್ಸೂರ್ ದಾರಂದಬಾಗಿಲು, ಬಾತಿಶಾ ಮುಹಮ್ಮದ್ ಮಂಚಿಲ, ಮುಝಫ್ಫರ್ ಅಝಾದ್ ನಗರ ಮತ್ತು ರೀಸರ್ಚ್ ಮತ್ತು ಸರ್ವೇ ಸದಸ್ಯರಾಗಿ ಹಾಫಿಲ್ ಮುಈನುದ್ದೀನ್ ಅಮ್ಜದಿ ಮತ್ತು ಜಾಫರ್ ಯು.ಎಸ್. ಅಳೇಕಲ ಅವರನ್ನು ಆಯ್ಕೆ ಮಾಡಲಾಯಿತು.

ಪ್ರೊ-ಆಕ್ಟಿವ್ ಟೀಂ ಸದಸ್ಯರಾಗಿ ಸಲಾಹುದ್ದೀನ್ ಮುಸ್ಲಿಯಾರ್ ಮದನಿ ನಗರ, ಹುಸೈನ್ ಕಲಂದರ್ ಮೇಲಂಗಡಿ, ಇಸ್ಮಾಯೀಲ್ ಮುಹಾಝ್ ಮೇಲಂಗಡಿ, ಎಡಿಟರ್ಸ್ ಟೀಂ ಸದಸ್ಯರಾಗಿ ಸೈಫುಲ್ಲಾ ಸಖಾಫಿ ಮುಕ್ಕಚ್ಚೇರಿ, ಅಸ್ಲಮ್ ಮುಸ್ಲಿಯಾರ್ ಅಳೇಕಲ, ಮುಹಮ್ಮದ್ ತಶ್ರೀಫ್ ಮೇಲಂಗಡಿ, ಇರ್ಶಾದ್ ಹಿಮಮಿ ಒಂಭತ್ತುಕೆರೆ ಅವರನ್ನು ಆಯ್ಕೆ ಮಾಡಲಾಯಿತು.

ಅನಾಲಿಸ್ಟ್ ಟೀಂ ಸದಸ್ಯರಾಗಿ ಮುಹಮ್ಮದ್ ಆಸಿಮ್ ಮುಸ್ಲಿಯಾರ್ ಅಳೇಕಲ, ಮುಹಮ್ಮದ್ ಫಾಝಿಲ್ ಅಳೇಕಲ, ಮುಹಮ್ಮದ್ ಸಫ್ವಾನ್ ಬದ್ಯಾರ್, ಮುಹಮ್ಮದ್ ತಾಜುದ್ದೀನ್ ಹಳೆಕೋಟೆ, ಗ್ರಾಫಿಕ್ಸ್ ಟೀಂ ಸದಸ್ಯರಾಗಿ ಮುಸ್ತಫಾ ಸಖಾಫಿ ಬೆಳ್ಳಾರೆ, ಹಾಫಿಝ್ ಇರ್ಶಾದ್ ಮುಸ್ಲಿಯಾರ್ ಅಕ್ಕರೆಕೆರೆ ಅವರನ್ನು ಆಯ್ಕೆ ಮಾಡಲಾಯಿತು.

ವೆಬ್ ಡೆವಲಪರ್ಸ್ ಸದಸ್ಯರಾಗಿ ಎಂ.ಎ. ರಿಲ್ವಾನ್ ಶಾ ಹಳೆಕೋಟೆ, ಮುಹಮ್ಮದ್ ಸಲ್ಮಾನ್ ಎಂ.ಎಸ್.ಇ ಮತ್ತು ಹಾಶಿರ್ ಅಲಿ ಹಳೆಕೋಟೆ, ಮೀಡಿಯಾ ಮತ್ತು ಡಾಕ್ಯುಮೆಂಟೇಶನ್ ಸದಸ್ಯರಾಗಿ ಮುಝಮ್ಮಿಲ್ ಮದನಿ ಕೊಟೇಪುರ, ಅಬ್ದುಲ್ ನಾಸಿರ್ ಚೊಂಬುಗುಡ್ಡೆ, ಸುಹೈಲ್ ದೇರಳಕಟ್ಟೆ, ನಿಝಾಮುದ್ದೀನ್ ಒಂಭತ್ತುಕೆರೆ ಅವರನ್ನು ಆಯ್ಕೆ ಮಾಡಲಾಯಿತು.

ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಮಾಜಿ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಝಿಯಾದ್ ತಂಙಳ್ ಅಳೇಕಲ ಅತಿಥಿಯಾಗಿ ಭಾಗವಹಿಸಿದ್ದರು. ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News