​ಕುಲಶೇಖರ: ಅಕ್ರಮ ಪಟಾಕಿ ದಾಸ್ತಾನು ಪತ್ತೆ

Update: 2021-08-19 17:10 GMT

ಮಂಗಳೂರು, ಆ.19: ನಗರದ ಪದವು ಗ್ರಾಮದ ಕುಲಶೇಖರ ಚೌಕಿ ಎಂಬಲ್ಲಿನ ಗೋದಾಮೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 4,31,630 ರೂ. ಬೆಲೆಯ ಪಟಾಕಿಯನ್ನು ಕಂಕನಾಡಿ ನಗರ ಪೊಲೀಸರು ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಆಲ್ವಿನ್ ಪಿಂಟೋ ಎಂಬಾತ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಪರಿಸರದಲ್ಲಿ ಜನವಸತಿ ಇರುವ ಮೊಟ್ಟೆ ದಾಸ್ತಾನು ಇಡುವ ಕಾಂಚನಾ ಗಂಗಾ ಟ್ರೇಡರ್ಸ್‌ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಿಟ್ಟಿದ್ದ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಕಂಕನಾಡಿ ನಗರ ಠಾಣೆಯ ಎಸ್ಸೈ ರಘುನಾಯಕ್ ದಾಳಿ ನಡೆಸಿ ಪಟಾಕಿ ಸ್ವಾಧೀನಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News