ಆ. 23ರಿಂದ ಕೆಎಸ್‌ಸಿಎ ಮಂಗಳೂರು ವಲಯ 19 ವರ್ಷದೊಳಗಿನ ತಂಡಕ್ಕೆ ಆಯ್ಕೆ ಶಿಬಿರ

Update: 2021-08-21 12:55 GMT

ಉಡುಪಿ, ಆ.21: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ (ಮಂಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡು) 19 ವರ್ಷ ಕೆಳಹರೆಯದ ಕ್ರಿಕೆಟ್ ತಂಡದ ಆಯ್ಕೆಗಾಗಿ ಆಯ್ಕೆ ಶಿಬಿರವೊಂದು ಆಗಸ್ಟ್ 23, 24 ಮತ್ತು 25ರಂದು ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನ ಶತಮಾನೋತ್ಸವ ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.

2002ರ ಸೆ.1ರಿಂದ 2005ರ ಆ.31ರೊಳಗೆ ಜನಿಸಿರುವ ಆಟಗಾರರು ಈ ಆಯ್ಕೆ ಶಿಬಿರದಲ್ಲಿ ಭಾಗವಹಿಸುವ ಅರ್ಹತೆ ಹೊಂದಿದ್ದಾರೆ. ಶಿಬಿರದಲ್ಲಿ ಭಾಗವ ಹಿಸಲಿಚ್ಛಿಸುವ ಆಟಗಾರರು ಜನನ ದಿನಾಂಕ, ಕಲಿಯುತ್ತಿರುವ ವಿದ್ಯಾಸಂಸ್ಥೆಯ ಹೆಸರು, ಕ್ರಿಕೆಟಿನ ಅನುಭವ, ಬೌಲಿಂಗ್, ಬ್ಯಾಟಿಂಗ್‌ನ ವಿಧ, ಮೊಬೈಲ್ ಸಂಖ್ಯೆ ಮುಂತಾದವನ್ನು ನಮೂದಿಸಿ ಆ.20ರೊಳಗಾಗಿ ಸಂಸ್ಥೆಯ ಈಮೈಲ್ ಮೂಲಕ - kscamlorezone@gmail.com - ಹೆಸರು ನೋಂದಾಯಿಸಿ ಕೊಳ್ಳಬಹುದು.

ನೋಂದಾಯಿತ ಆಟಗಾರರು, ನೀಡಲ್ಪಡುವ ಸಂದೇಶವನ್ನು ಅನುಸರಿಸಿ ಸೂಕ್ತ ಜನನ ಪ್ರಮಾಣ ಪತ್ರದ ಮೂಲ ಪ್ರತಿ, ಫೋಟೋ ಪ್ರತಿ ಮತ್ತು ಆಟದ ಪರಿಕರಗಳೊಂದಿಗೆ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದು.

ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ ಆಟಗಾರರನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಹೆಚ್ಚಿನ ವಿವರಗಳಿಗೆ ಗ್ಲೆನ್ ರೋಷನ್ ಡಿ ಸೋಜ (ಮೊಬೈಲ್:0824-4162233) ಇವರನ್ನು ಸಂಪರ್ಕಿಸಬಹುದು ಎಂದು ಕೆಎಸ್‌ಸಿಎ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News