​ಕೆಎಂಸಿ ಮಣಿಪಾಲಕ್ಕೆ ಎಎಚ್‌ಪಿಐನ ನರ್ಸಿಂಗ್ ಎಕ್ಸಲೆನ್ಸ್ ಪ್ರಶಸ್ತಿ

Update: 2021-08-24 16:38 GMT

ಉಡುಪಿ, ಆ.24: ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆ ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಆಫ್ ಇಂಡಿಯಾ (ಎಎಚ್‌ಪಿಐ)ದಿಂದ ಆರೋಗ್ಯದ ಶ್ರೇಷ್ಠತೆಗಾಗಿ ಕೊಡಲಾಗುವ 2021ನೇ ಸಾಲಿನ ನರ್ಸಿಂಗ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದಿದೆ.

ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಶರತ್ ಕೆ ರಾವ್ ಅವರು, ಕೆಎಂಸಿ ಮಣಿಪಾಲದ ನರ್ಸಿಂಗ್ ಸೇವೆಗಳ ಮುಖ್ಯಸ್ಥ ಶುಭ ಸೂರಿಯ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಎಎಚ್‌ಪಿಐ ಭಾರತದಲ್ಲಿ ಹೆಲ್ತೆಕೇರ್ ಸಂಸ್ಥೆಗಳ ಪ್ರತಿನಿಧಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದು ಪ್ರತಿ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆಗಳು ಸಾಧಿಸಿದ ಶ್ರೇಷ್ಠತೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ರೋಗಿಗಳ ಆರೈಕೆ, ರೋಗಿಯ ಶಿಕ್ಷಣ ಮತ್ತು ಅರಿವು, ಶುಶ್ರೂಷಾ ಸಂಪನ್ಮೂಲ ನಿರ್ವಹಣೆ, ಶುಶ್ರೂಷಾ ಆರೈಕೆ ಗುಣಮಟ್ಟ, ಸಂವಹನ ಮತ್ತು ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳಂತ ಶುಶ್ರೂಷಾ ಆರೈಕೆಯ ಎಲ್ಲಾ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಆಸ್ಪತ್ರೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಶಸ್ತಿ ಹಸ್ತಾಂತರ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾ ಧಿಕಾರಿ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಮತ್ತು ಗುಣಮಟ್ಟ ಅನುಷ್ಠಾನದ ಸಲಹೆಗಾರರಾದ ಡಾ. ಸುನೀಲ್ ಸಿ ಮುಂಡ್ಕೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News