ಉದ್ಯಮ ನೋಂದಣಿ ಕಡ್ಡಾಯ

Update: 2021-08-25 15:04 GMT

ಉಡುಪಿ, ಆ. 25: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ಘಟಕಗಳ ನೋಂದಣಿ ಬಗ್ಗೆ ಜುಲೈ 1ರಿಂದ ಉದ್ಯಮ ನೋಂದಣಿ ಚಾಲ್ತಿಯಲ್ಲಿದ್ದು, ಆನ್‌ಲೈನ್‌ನಲ್ಲಿ -https://udyamregistration.gov.in- ಲಿಂಕ್ ನ್ನು ಬಳಸಿ ಉದ್ಯಮ ನೋಂದಣಿ ಪ್ರಮಾಣ ಪತ್ರ ಪಡೆಯಬಹುದಾಗಿದೆ.

ಈ ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಜಿಲ್ಲೆಯ ಎಲ್ಲಾ ಕೈಗಾರಿಕಾ ಘಟಕಗಳು ಕಡ್ಡಾಯವಾಗಿ ಉದ್ಯಮ ನೋಂದಣಿ ಮಾಡುವಂತೆ ಹಾಗೂ ಈ ಹಿಂದೆ ಪಡೆದ ಶಾಶ್ವತ ನೋಂದಣಿ ಪ್ರಮಾಣ ಪತ್ರ (ಎಸ್‌ಎಸ್‌ಐ) ಉದ್ದಿಮೆದಾರರ ಜ್ಞಾಪನ ವಿವರಣಾ ಪತ್ರ ಭಾಗ-2 ಹಾಗೂ ಉದ್ಯೋಗ್ ಆಧಾರ್ ಮೆಮೊರಂಡಮ್‌ಗೆ ಮುಂದೆ ಮಾನ್ಯತೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದ್ದರಿಂದ ಎಲ್ಲಾ ಕೈಗಾರಿಕೋದ್ಯಮಿಗಳು ಹೊಸದಾಗಿ ‘ಉದ್ಯಮ ರಿಜಿಸ್ಟ್ರೇಶನ್’ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News