ಕೈಲಾರ್: ಎಸೆಸೆಲ್ಸಿ ಸಾಧಕಿಯರಿಗೆ ಶಂಸುಲ್ ಉಲೆಮಾ ಕಮಿಟಿಯಿಂದ ಸನ್ಮಾನ

Update: 2021-08-26 15:18 GMT

ಬಂಟ್ವಾಳ, ಆ.26: ಇತ್ತೀಚೆಗೆ ನಡೆದ 2020-2021ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಕಾವಳ ಮೂಡೂರು, ಕಾವಳ ಪಡೂರು ಗ್ರಾಮ ವ್ಯಾಪ್ತಿಯ  ಕೈಲಾರ್ ಪ್ರದೇಶದ ಇಬ್ಬರು ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಶಂಸುಲ್ ಉಲೆಮಾ ಯಂಗ್ಮೆನ್ಸ್ ಕೈಲಾರ್-ಬರ್ಕಟ್ಟ ಸಮಿತಿಯ ವತಿಯಿಂದ ಸಾಧಕಿಯರನ್ನು ಸನ್ಮಾನಿಸಲಾಯಿತು.

ಕಾವಳಮೂಡೂರು ಗ್ರಾಮದ ರಫೀಕ್ ಕೈಲಾರ್ ಎಂಬವರ ಪುತ್ರಿ ರಿಶಾನ 563 ಅಂಕಗಳನ್ನು ಪಡೆದಿದ್ದು, ರಫೀಕ್ ಜಿ.ಎಂ. ಎಂಬವರ ಪುತ್ರಿ ಅಲಿಫ 521ಅಂಕಗಳನ್ನು ಪಡೆಯುವ ಮೂಲಕ ಕೀರ್ತಿಗೆ ಪಾತ್ರರಾಗಿದ್ದಾರೆ. ಸನ್ಮಾನ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಇಬ್ರಾಹೀಂ ಕೈಲಾರ್, ಅಧ್ಯಕ್ಷ ಸಜ್ಜಾದ್ ಬರ್ಕಟ್ಟ, ಇಝ್ಝತುಲ್ ಇಸ್ಲಾಮ್ ಮಸೀದಿಯ ಅಧ್ಯಕ್ಷ ಹನೀಫ್ ಖಂಡಿಗ, ಯಾಕೂಬ್ ಖಂಡಿಗ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News