ಕಡಬ: ಮೆದುಳಿನ ರಕ್ತಸ್ರಾವದಿಂದ ಬಾಲಕಿ ಮೃತ್ಯು

Update: 2021-08-27 12:29 GMT

ಕಡಬ, ಆ. 27. ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ 11 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಎಂಬಲ್ಲಿ ಶುಕ್ರವಾರ ನಡೆದಿದೆ.

ಮೃತ ಬಾಲಕಿಯನ್ನು ಕುಂತೂರು ಗ್ರಾಮದ ಮಣಿಕ್ಕಳ ನಿವಾಸಿ ಸೋಮನಾಥ ಗೌಡ - ಕುಸುಮಾವತಿ ದಂಪತಿಯ ಪುತ್ರಿ ಅಪೇಕ್ಷಾ ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಶುಕ್ರವಾರ ಬೆಳಗ್ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News