ಭಟ್ಕಳ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

Update: 2021-08-28 12:40 GMT

ಭಟ್ಕಳ : ಶುಕ್ರವಾರ ಸಂಜೆ ಇಲ್ಲಿನ ನವಾಯತ್ ಕಾಲನಿಯ ಅಮೀನುದ್ದೀನ್ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮೃತರನ್ನು ಇಲ್ಲಿನ ಬದ್ರಿಯಾ ಕಾಲನಿಯ ಇಮ್ರಾನ್ ಕುಂದನಗುಡಾ (42) ಎಂದು ಗುರುತಿಸಲಾಗಿದೆ. 

ಇಮ್ರಾನ್ ತನ್ನ ಪತ್ನಿ ಮತ್ತು ಆತನ ಎಂಟು ತಿಂಗಳ ಮಗಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದ್ದು, ಇನ್ನೊಂದು ಬೈಕಿನಲ್ಲಿದ್ದ ಸವಾರ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಇಮ್ರಾನ್ ಭಟ್ಕಳದ ಕೋಳಿ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News