ಸೆ.1: ಉಡುಪಿ ಜಿಲ್ಲೆಯಲ್ಲಿ 9ರಿಂದ ದ್ವಿತೀಯ ಪಿಯು ತರಗತಿ ಆರಂಭ: ಸಚಿವ ಸುನೀಲ್ ಕುಮಾರ್‌

Update: 2021-08-30 12:48 GMT

ಉಡುಪಿ, ಆ.30: ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೊರೋನ ಪಾಸಿಟಿವಿಟಿ ದರವು ಶೇ.1.4ಗೆ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸೆ.1ರಿಂದ ಒಂಭತ್ತರಿಂದ ದ್ವಿತೀಯ ಪಿಯುಸಿವರೆಗಿನ ತರಗತಿಗಳನ್ನು ಆರಂಭಿಸಲು ಜಿಲ್ಲಾಡಳಿತವು ನಿರ್ಧರಿಸಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಬಹಳ ಎಚ್ಚರಿಕೆಯಿಂದ ತರಗತಿಗಳನ್ನು ನಡೆಸಬೇಕು. ತರಗತಿ ನಡೆಸುವ ಶಿಕ್ಷಕರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News