ಸೆ.4-5ರಂದು ‘ಫಿಟ್ ರಹೋ ಉಡುಪಿ’ 75ಕಿ.ಮೀ. ಓಟ

Update: 2021-08-31 13:00 GMT

ಉಡುಪಿ, ಆ.31: ಟೀಮ್ ನೇಶನ್ ಫಸ್ಟ್ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿಯ ಒಟ್ಟು 100 ಗ್ರಾಮಗಳಲ್ಲಿ ಹಾದು ಹೋಗುವ ‘ಫಿಟ್ ರಹೋ ಉಡುಪಿ’ 75 ಕಿ.ಮೀ. ಓಟವನ್ನು ಸೆ.4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.

ಸೆ.4ರಂದು ಬೆಳಗ್ಗೆ 7ಗಂಟೆಗೆ ಉಡುಪಿ ನಗರದ ಕ್ಲಾಕ್ ಟವರ್ ಎದುರು ಈ ಓಟಕ್ಕೆ ಪಲಿಮಾರು ಸ್ವಾಮೀಜಿ ಚಾಲನೆ ನೀಡಲಿರುವರು. ಬಳಿಕ ಮಣಿ ಪಾಲ, ಉದ್ಯಾವರ, ಕಟಪಾಡಿ, ಮಟ್ಟು ಬೀಚ್ ಮಾರ್ಗವಾಗಿ ಸಂಜೆ 5.40ಕ್ಕೆ ಕೊನೆಗೊಳ್ಳಲಿವೆ. ಸೆ.5ರಂದು ಬೆಳಗ್ಗೆ 7ಗಂಟೆಗೆ ಅಲ್ಲಿಂದ ಮುಂದುವರೆದು ಗುಜ್ಜರಬೆಟ್ಟು, ಸಂತೆಕಟ್ಟೆ, ಆದಿಉಡುಪಿ, ಕಿದಿಯೂರು, ಅಂಬಲಪಾಡಿ ಮಾರ್ಗ ವಾಗಿ ಅಜ್ಜರಕಾಡಿನಲ್ಲಿ ಸಂಜೆ 4ಗಂಟೆಗೆ ಸಮಾಪ್ತಿಗೊಳ್ಳಲಿದೆ.

ಈ ಓಟದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಭಾಗವಹಿಸಲಿರುವರು. ಓಟದ ಮಧ್ಯೆ ಒಟ್ಟು 24 ಜಂಕ್ಷನ್‌ಗಳಲ್ಲಿ ದೇಶಭಕ್ತಿಯ ಪ್ರೇರಣೆಯ ಹಾಡುಗಳು ಹಾಗೂ ಕೊರೋನಾ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ಶಾಸಕ ಕೆ. ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನೇಶನ್ ಫಸ್ಟ್ ತಂಡದ ಅಧ್ಯಕ್ಷ ಸೂರಜ್ ಕಿದಿಯೂರು, ಕಾರ್ಯದರ್ಶಿ ಸಾತ್ವಿಕ್ ಗಡಿಯಾರ್, ಮಹೇಶ್ ಠಾಕೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News