ಉಡುಪಿ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಲಸಿಕೆ ವಿತರಣೆ

Update: 2021-08-31 15:15 GMT

ಉಡುಪಿ, ಆ.31: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 10 ಲಕ್ಷಕ್ಕೂ ಅಧಿಕ ಡೋಸ್ ಕೋವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಇಂದು ಸಂಜೆಯವರೆಗೆ ಒಟ್ಟು 7,52,027 ಮಂದಿ ಮೊದಲ ಡೋಸ್‌ನ್ನು ಪಡೆದರೆ, 2,67,651 ಮಂದಿ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 10,19,678 ಡೋಸ್ ಲಸಿಕೆ ವಿತರಿಸಿದಂತಾಗಿದೆ.

ಜಿಲ್ಲೆಯಲ್ಲಿ 18 ವರ್ಷ ಮೇಲಿನ ಒಟ್ಟು 10,02,761 ಮಂದಿಗೆ ಎರಡೂ ಲಸಿಕೆಯನ್ನು ವಿತರಿಸುವ ಗುರಿ ಇದೆ. ಇಂದು ಸಂಜೆಯವರೆಗೆ ಇವರಲ್ಲಿ ಶೇ.76 ಮಂದಿಗೆ ಮೊದಲ ಡೋಸ್‌ನ್ನು ನೀಡಿದ್ದರೆ, ಶೇ.29 ಮಂದಿಗೆ ಎರಡೂ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಇಲಾಖೆಯ ಕೋವಿಡ್ ಲಸಿಕೆ ನೋಡೆಲ್ ಅಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ. ಸದ್ಯ ಲಸಿಕೆ ವಿತರಣೆ ಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ದಿನದಲ್ಲಿ 12,892 ಮಂದಿಗೆ ಲಸಿಕೆ:  ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 12,892 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ 8883 ಮಂದಿಗೆ ಮೊದಲ ಡೋಸ್ ಹಾಗೂ 4009 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗ ಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 6,330 ಮಂದಿ ಮೊದಲ ಹಾಗೂ 1495 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 2553 ಮಂದಿಗೆ ಮೊದಲ ಹಾಗೂ 2452 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡ ಲಾಗಿದೆ.ಅಲ್ಲದೇ 23 ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು 39 ಮಂದಿ ಮುಂಚೂಣಿ ಕಾರ್ಯಕರ್ತರು ಇಂದು ಎರಡನೇ ಡೋಸ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News