ಕೋವಿಡ್ ಲಸಿಕೆ ವ್ಯತಿರಿಕ್ತ ಪರಿಣಾಮ ಬೀರದು: ವೈದ್ಯಾಧಿಕಾರಿ ವಿದ್ಯಾಸಾಗರ್

Update: 2021-09-01 10:37 GMT

ಉಳ್ಳಾಲ: ಶಿವಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ಕೊರಗಜ್ಜ ಶಿವಾಜಿ ಸೇವಾ ಸಮಿತಿ ತೊಕ್ಕೋಟು ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶಾಸಕ ಖಾದರ್ ರವರ ಸಹಕಾರ ದಲ್ಲಿ ತೊಕ್ಕೋಟುಶಿವಾಜಿ ಫ್ರೆಂಡ್ಸ್ ಸರ್ಕಲ್ ನಲ್ಲಿ  ಕೋವಿಡ್ ನಿರೋಧಕ ಲಸಿಕಾ ಶಿಬಿರ ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ‌ವಿದ್ಯಾಸಾಗರ್ ಅವರು ರೋಗಿಗಳು, ಗರ್ಭಿಣಿಯರು ಈ ಲಸಿಕೆ ಪಡೆಯಲು ಅವಕಾಶ ಇದೆ.ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.ಲಸಿಕೆಯನ್ನು ಎಲ್ಲರೂ ಯಾವುದೇ ಗೊಂದಲ ಕ್ಕೀಡಾಗದೇ  ಪಡೆದು ಕೊಳ್ಳಲು ಮುಂದೆ ಬರಬೇಕು.ಇದಕ್ಕೆ ಬೇಕಾದ ವ್ಯವಸ್ಥೆ ನಾವು ಮಾಡಿದ್ದೇವೆ ಎಂದರು.

ತೊಕ್ಕೊಟು ರೀಚಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಸಿರಿಲ್ ತೊಕ್ಕೊಟ್ಟು ,ಧನಲಕ್ಷ್ಮಿ ಗಟ್ಟಿ, ತ್ವಾಹಾ ಹಾಜಿ, ಕೌನ್ಸಿಲರ್ ಗೀತಾ ಬಾಯಿ ಪ್ರಭು  ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮ ದಲ್ಲಿ ಉಳ್ಳಾಲ ನಗರ ಸಭಾ  ಸುರೇಶ್ ಭಟ್ನಗರ, ನಗರ ಸಭಾ ಅಧ್ಯಕ್ಷ ಚಿತ್ರ ಕಲಾ, ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸದಾನಂದ ಒಂಭತ್ತು ಕೆರೆ, ಕಾರ್ಯದರ್ಶಿ ಚಂದ್ರ ಹಾಸ್ ಶೆಟ್ಟಿ ಪ್ರಕಾಶ್ ನಗರ, ವೈದ್ಯಾಧಿಕಾರಿ ಡಾ.ವಿದ್ಯಾ ಸಾಗರ್,  ನಾಗೇಶ್, ಕಮಲಾಕ್ಷ, ಹಮೀದ್ ಒಂಭತ್ತು ಕೆರೆ, ಲಕ್ಷ್ಮಣ ಕೃಷ್ಣ ನಗರ, ಯುಚ್ ಅಲ್ತಾಫ್ ಮೊದಲಾದವರು ಉಪಸ್ಥಿತರಿದ್ದರು.

ರಶ್ವಿತಾ ಪ್ರಾರ್ಥಿಸಿದರು. ಕಾರ್ಯ ದರ್ಶಿ ಚಂದ್ರ ಹಾಸ್ ಪ್ರಕಾಶ್ ನಗರ ಸ್ವಾಗತಿಸಿ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News