ಉಡುಪಿ: ಸೆ.6-7ರಂದು ನಾಡದೋಣಿಗಳ ತಪಾಸಣೆ

Update: 2021-09-01 15:40 GMT

ಉಡುಪಿ, ಸೆ.1: ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ನಾಡದೋಣಿಗಳ ಮೀನುಗಾರಿಕೆ ಸೀಮೆಎಣ್ಣೆ ರಹದಾರಿ ನವೀಕರಣ ಹಾಗೂ ಹೊಸದಾಗಿ ಅರ್ಜಿ ಸ್ವೀಕರಿಸಿದ ದೋಣಿಗಳ ತಪಾಸಣೆ ಕಾರ್ಯವನ್ನು ಕಂದಾಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯು ಜಂಟಿಯಾಗಿ ನಡೆಸಲಿದೆ.

ಸೆ.6ರಂದು ಉಡುಪಿ ತಾಲೂಕಿನ ಮಲ್ಪೆ ಪಡುಕೆರೆ, ಹೆಜಮಾಡಿ, ಸಾಸ್ತಾನ ಕೋಡಿ ಮತ್ತು ಸೆ.7ರಂದು ಕುಂದಾಪುರ ತಾಲೂಕಿನ ಕುಂದಾಪುರ ಕೋಡಿ, ಗಂಗೊಳ್ಳಿ, ತ್ರಾಸಿ, ಕಂಚುಗೋಡು, ಮರವಂತೆ ಕೊಡೇರಿ, ಕಿರಿಮಂಜೇಶ್ವರ, ಪಡುವರಿ, ತಾರಾಪತಿ ಹಾಗೂ ಶಿರೂರು ಪ್ರದೇಶಗಳಲ್ಲಿ ತಪಾಸಣೆ ನಡೆಸುವುದ ರಿಂದ ಈ ಭಾಗದ ಎಲ್ಲಾ ನಾಡದೋಣಿ ಮೀನುಗಾರರು ಅಗತ್ಯ ದಾಖಲಾತಿಯೊಂದಿಗೆ(ನೋಂದಣಿ ಪ್ರತಿ ಮತ್ತು ಪರವಾನಿಗೆ ಪ್ರತಿ)ದೋಣಿ ಮತ್ತು ಇಂಜೀನ್ ಹಾಜರು ಪಡಿಸಬೇಕು. ತಪ್ಪಿದ್ದಲ್ಲಿ ಸೀಮೆಎಣ್ಣೆ ರಹದಾರಿಯನ್ನು ನವೀಕರಿಸಲಾಗುವುದಿಲ್ಲ. ಎಲ್ಲಾ ನಾಡದೋಣಿ ಮೀನುಗಾರರು ಈ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ತಪಾಸಣೆಗೆ ಸಹಕರಿಸುವಂತೆ ಉಡುಪಿಯ ಮೀನುಗಾರಿಕಾ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News