​ಕೈಕಂಬ: ನೂತನ ಮದ್ರಸ ಉದ್ಘಾಟನೆ

Update: 2021-09-01 18:18 GMT

ಗುರುಪುರ, ಸೆ.1: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಬ್ಯಾಸ ಬೋರ್ಡ್‌ನ ಅಧೀನದಲ್ಲಿ ಕೈಕಂಬದ ಅಸ್ರಾರುದ್ದೀನ್ ಮಸೀದಿಯ ಕಟ್ಟಡದಲ್ಲಿ ನಿರ್ಮಿಸಲಾದ ಅಲ್ಮದ್ರಸತುಲ್ ಅಸ್ರರುದ್ದೀನ್ ಮದ್ರಸವನ್ನು ಬುಧವಾರ ಗುರುಪುರ ರೇಂಜ್ ಜಂಇಯ್ಯತುಲ್ ಮಅಲ್ಲಿಮಿನ್ ಅಧ್ಯಕ್ಷ ಜಮಲುದ್ದೀನ್ ದಾರಿಮಿ ಉದ್ಘಾಟಿಸಿದರು.

ಈ ವೇಳೆ ಅಲ್ ಬಿರ್ರ್‌ ಸ್ಕೂಲ್ನ ಅಧ್ಯಕ್ಷ ಆಸಿಫ್ ಆದರ್ಸ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಮದ್ರಸದ ಅಧ್ಯಕ್ಷ ಮಾಮು ಮಳಲಿ ಅಧ್ಯಕ್ಷತೆ ವಹಿಸಿದ್ದರು. ಶಾಹುಲ್ ಹಮೀದ್ ಹಾಜಿ ಮೆಟ್ರೊ, ಅಬೂಬಕ್ಕರ್ ಮಳಲಿ, ಮುಹಮ್ಮದ್ ಕೊಝಿ, ಹಂಝ ಲತೀಫಿ, ಇಸ್ಮಾಯೀಲ್ ಹಾಜಿ ಡಿಲೆಕ್ಸೃ್, ಝಕಾರಿಯ ಹಾಜಿ ಅಡ್ಡೂರು, ಎಂ.ಜಿ.ಬಾಷಾ, ರಿಯಾಝ್ ಮಿಲನ್, ಶೇಕಬ್ಬ ಹಾಜಿ ಸೆಲಿನ, ಅಸ್ರಾರುದ್ದೀನ್ ಮಸ್ಜಿದ್‌ನ ಇಮಾಮ್ ಇಮ್ತಿಯಾಝ್ ರಾಝ್ವಿ ಉಪಸ್ಥಿತರಿದ್ದರು.

ಮದ್ರಸ ಸಮಿತಿಯ ಕಾರ್ಯದರ್ಶಿ ಅಹ್ಮದ್ ಹುಸೈನ್ ಸ್ವಾಗತಿದರು. ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News