ಸೆ.6: ಸಂಚಾರಿ ಶಿಥಲೀಕರಣ ವಾಹನಕ್ಕೆ ಚಾಲನೆ

Update: 2021-09-04 17:13 GMT

ಮಂಗಳೂರು ಸೆ.4: ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಟನ್ ಸಾಮರ್ಥ್ಯದ 4 ಹಾಗೂ ನಾಲ್ಕು ಟನ್ ಸಾಮರ್ಥ್ಯದ 3 ಹಾಗೂ ಒಂದು ಟನ್ ಸಾಮರ್ಥ್ಯದ 1 ಸೇರಿದಂತೆ ಒಟ್ಟು 8 ಸಂಚಾರಿ ಶಿಥಲೀಕರಣ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ನಗರದ ಹೊಯ್ಗೆ ಬಜಾರಿನ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಆವರಣದಲ್ಲಿ ಸೆ.6ರಂದು ಬೆಳಗ್ಗೆ 9:30ಕ್ಕೆ ಹಮ್ಮಿಕೊಳ್ಳಲಾಗಿದೆ.

ಮೀನುಗಾರಿಕೆ, ಬಂದರು ಸಚಿವ ಎಸ್. ಅಂಗಾರ, ಶಾಸಕ ವೇದವ್ಯಾಸ ಕಾಮತ್ ಹಾಗೂ ಇತರ ಗಣ್ಯರು ಭಾಗವಹಿಸುವರು ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News