ಉಡುಪಿ: ಸೆ.9ರಿಂದ ರಂಜನಿ ಸಂಸ್ಮರಣೆಯಲ್ಲಿ ಸಂಗೀತ ಕಾರ್ಯಕ್ರಮ

Update: 2021-09-06 13:46 GMT

ಉಡುಪಿ, ಸೆ.6: ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ವಿಶೇಷ ಸಂಗೀತ ಕಾರ್ಯಕ್ರಮಗಳ ಯೂಟ್ಯೂಬ್ ಪ್ರಸಾರ ಸೆ.9ರಿಂದ 19 ವರಗೆ ನಿರಂತರವಾಗಿ ನಡೆಯಲಿದೆ ಎಂದು ಟ್ರಸ್ಟ್ನ ಮುಖ್ಯಸ್ಥರಾದ ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.

ರಾಜ್ಯ ಮತ್ತು ಹೊರರಾಜ್ಯಗಳ ಖ್ಯಾತ ಗಾಯಕರು ಮತ್ತು ಸಂಗೀತ ವಿದ್ವಾಂಸರು ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದವರು ಹೇಳಿದ್ದಾರೆ.

ಸೆ.9 ಸಂಜೆ 4ಗಂಟೆಗೆ ರಂಜನಿ ಅವರು 2012ರಲ್ಲಿ ನೀಡಿದ್ದ ಸಂಗೀತ ಕಚೇರಿ ಯನ್ನು ಪ್ರಸಾರ ಮಾಡಲಾಗುತ್ತದೆ. 6:30ಕ್ಕೆ ಸತ್ಸಂಗ ಭಜನೆ, ಸೆ.10ಕ್ಕೆ ಸಂಜೆ 4:00ಕ್ಕೆ ಸ್ವರಾಂಜಲಿ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, 6:30ಕ್ಕೆ ಚೆನ್ನೈನ ಮೈಲೈ ಎಂ.ಕಾರ್ತಿಕೇಯನ್ ಅವರಿಂದ ನಾಗಸ್ವರವಾದನ ನಡೆಯಲಿದೆ.

ಸೆ.11ರಂದು ಸಂಜೆ 4 ಕ್ಕೆ ಬೆಂಗಳೂರಿನ ಪ್ರಿನ್ಸ್ ರಾಮವರ್ಮರಿಂದ ಪ್ರವಚನ ಮತ್ತು ಪ್ರಾತ್ಯಕ್ಷಿಕೆ, 6:30ಕ್ಕೆ ಚೆನ್ನೈನ ಶ್ರೀರಂಜನಿ ಸಂತಾನ ಗೋಪಾಲನ್ ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಸೆ.12ರಂದು ಸಂಜೆ 4:00ಕ್ಕೆ ಚೆನ್ನೈನ ಆರ್.ಕೆ.ಶ್ರೀರಾಮ್ ಕುಮಾರ್‌ರಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ, 6:30ಕ್ಕೆ ಚೆನ್ನೈನ ಗಾಯತ್ರಿ ವೆಂಕಟರಾಘವನ್‌ರಿಂದ ಕರ್ನಾಟಕ ಶಾಸ್ತ್ರೀಯಸಂಗೀತ, ಸೆ.13ರಂದು ಸಂಜೆ 4 ಕ್ಕೆ ಗಂಟೆಗೆ ದೆಹಲಿಯ ಸೌಮಿತ್ರ ಠಾಕೂರ್‌ರಿಂದ ಸಿತಾರ್ ವಾದನ, 6:30ಕ್ಕೆ ಬೆಂಗಳೂರಿನ ಲಲಿತರಾಮ್‌ರಿಂದ ಉಪನ್ಯಾಸ ನಡೆಯಲಿದೆ.

ಸೆ.14ರಂದು ಸಂಜೆ 4 ಕ್ಕೆ ಬೆಂಗಳೂರಿನ ನಿರಂಜನ್ ದಿಂದೋಡಿ ಅವರ ಕರ್ನಾಟಕ ಶಾಸ್ತ್ರೀಯ ಗಾಯನ, 6:30ಕ್ಕೆ ಮೈಸೂರಿನ ದೇವಿ ಪಿ. ಇವರಿಂದ ಹಿಂದೂಸ್ತಾನಿ ಗಾಯನ, ಸೆ.15ಕ್ಕೆ ಸಂಜೆ 4:00ಕ್ಕೆ ಚೆನ್ನೈನ ಮನ್ನರ್ಕೊಯಿಲ್ ಬಾಲಾಜಿ ಅವರಿಂದ ಉಪನ್ಯಾಸ-ಪ್ರಾತ್ಯಕ್ಷಿಕೆ, 6:30ಕ್ಕೆ ಚೆನ್ನೈನ ಸುನಿಲ್ ಗರ್‌ಗ್ಯಾನ್‌ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಸೆ.16ಕ್ಕೆ ಬೆಂಗಳೂರಿನ ಹಿರಣ್ಮಯೀ ಎಸ್.ರಿಂದ ಹಿಂದೂಸ್ತಾನಿ ಗಾಯನ, 6:30ಕ್ಕೆ ಹೈದರಾಬಾದ್‌ನ ಜೆ.ಎಸ್.ಶ್ರೀರಾಮ್ ತಂಡದಿಂದ ನಮಸಂಕೀರ್ತನ.

ಸೆ.17ರಂದು ಬಾಲಪ್ರತಿಭೆಗಳಾದ ಅರ್ಜುನ್ ಸಾಯಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 6:30ಕ್ಕೆ ಉಡುಪಿಯ ಅರ್ಚನಾ-ಸಮನ್ವಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.18ರಂದು ಸಂಜೆ 4 ಕ್ಕೆ ಬೆಂಗಳೂರಿನ ರಕ್ಷಿತಾರಮೇಶ್ರಿಂದ ವೀಣಾವಾದನ, 6:30ಕ್ಕೆ ಚೆನ್ನೈನ ಭರತ್ ಸುಂದರ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೆ.19ರಂದು ಸಂಜೆ 4 ಕ್ಕೆ ರಘುನಾಥ್ ದಾಸ್ ಮಹಾರಾಜ್ ಮತ್ತು ತಂಡದಿಂದ ವರ್ಖರಿ ಭಜನ್ಸ್, 6:30ಕ್ಕೆ ಮೈಸೂರಿನ ಮಂಜುನಾಥ್ ಮತ್ತು ಸುಮಂತ್ ಮಂಜುನಾಥ್‌ರಿಂದ ದ್ವಂದ್ವ ವಯೋಲಿನ್ ವಾದನ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ರಂಜನಿ ಮೆಮೋರಿಯಲ್ ಟ್ರಸ್ಟ್ನ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರವಾಗಲಿದೆ ಎಂದು ಪ್ರೊ.ಅರವಿಂದ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News