ಬೇಡಿಕೆ ಈಡೇರಿಸಲು ಅಕ್ಷರದಾಸೋಹ ನೌಕರರಿಂದ ಮನವಿ

Update: 2021-09-07 13:19 GMT

ಮಂಗಳೂರು, ಸೆ.7: ಅಕ್ಷರದಾಸೋಹ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯು ಮಂಗಳವಾರ ದ.ಕ.ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದೆ.

ಅಕ್ಷರ ದಾಸೋಹ ನೌಕರರು ಕೊರೋನ ಅವಧಿಯಲ್ಲಿ ಜರ್ಜರಿತರಾಗಿದ್ದರೂ ಯಾವುದೇ ಆರ್ಥಿಕ ಪ್ಯಾಕೇಜ್ ಅಥವಾ ಆಹಾರ ಧಾನ್ಯದ ಕಿಟ್ ನೀಡಿಲ್ಲ. ಅಲ್ಲದೆ 2021ರ ಜೂನ್, ಜುಲೈ, ಆಗಸ್ಟ್ ತಿಂಗಳ ವೇತನ ಕೂಡಾ ನೀಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಕ್ಕಳ ಸಂಖ್ಯೆ ಕಡಿಮೆ ಇದೆ ಮತ್ತು ವಯಸ್ಸಿನ ಕಾರಣಕ್ಕೆ ಬಿಸಿಯೂಟ ನೌಕರರನ್ನು ಕೆಲಸದಿಂದ ವಜಾಗೊಳಿಸಬಾರದು. ಅಲ್ಲದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದ್ದರೆ ಹೊಸ ನೇಮಕಾತಿಯನ್ನು ಮಾಡಬೇಕು. ಎಲ್ಲಾ ಶಾಲೆಗಳಲ್ಲಿ ಕನಿಷ್ಟ ಎರಡು ಮಂದಿ ನೌಕರರು ಕೆಲಸ ಮಾಡುವಂತಿರಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರು. ಬಿಸಿಯೂಟ ನೌಕರರ ಕೆಲಸದ ಅವಧಿಯ ನಂತರ ಕೈೋಟದ ಕೆಲಸಗಳಿಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಅಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ, ಕೋಶಾಧಿಕಾರಿ ರತ್ನಮಾಲಾ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News