ಹಿರಿಯ ನಿವೃತ್ತ ನೌಕರರ ಪರ ನ್ಯಾಯಾಲಯ ತೀರ್ಪು

Update: 2021-09-07 14:39 GMT

ಉಡುಪಿ, ಸೆ.7: ಪಿಂಚಣಿದಾರರಿಗೆ ಮೂಲ ನಿವೃತ್ತಿ ವೇತನದ ಶೇ.20ರಷ್ಟು ಹೆಚ್ಚಿನ ಸೌಲಭ್ಯವನ್ನು 81ನೇ ಜನ್ಮದಿನಾಂಕದಿಂದ ಈಗ ನೀಡಲಾ ಗುತ್ತಿದ್ದು, ಸರಕಾರಿ ಆದೇಶದಲ್ಲಿ ಅದು 80 ವರ್ಷದಿಂದ ಎಂದಿದೆ. ಆದುದರಿಂದ ನಿವೃತ್ತರ 80ನೇ ಜನ್ಮದಿನಾಂಕದಿಂದಲೇ ಸೌಲಭ್ಯವನ್ನು ನೀಡಲು ಆದೇಶಿಸುವಂತೆ ನಿವೃತ್ತರೊಬ್ಬರು ಗುವಾಹತಿ ಉಚ್ಛನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಅವರ ಮನವಿಯನ್ನು, ಶಬ್ದಕೋಶದ ಅರ್ಥ ಇನ್ನಿತರ ದಾಖಲೆಗಳೊಂದಿಗೆ ಪರಿಶೀಲಿಸಿದ ನ್ಯಾಯಾಲಯ 81ನೇ ಹುಟ್ಟುದಿನದಿಂದ ಸೌಲಭ್ಯ ನೀಡುವುದು ಸರಿಯಲ್ಲ, ಅರ್ಜಿದಾರರು 80ನೇ ಜನ್ಮದಿನಾಂಕದಿಂದ ಸೌಲಭ್ಯಕ್ಕೆ ಅರ್ಹರು ಎಂಬುದಾಗಿ ತೀರ್ಪು ನೀಡಿದೆ. ತೀರ್ಪಿನ ವಿರುದ್ಧ ರಾಜ್ಯ ಸರಕಾರ ರಾಷ್ಟ್ರದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಗುವಾಹತಿ ಉಚ್ಛ ನ್ಯಾಯಾಲಯದ ತೀರ್ಮಾನ್ನು ಎತ್ತಿ ಹಿಡಿಯುವುದರ ಮೂಲಕ ನಿವೃತ್ತರ ಪರವಾಗಿ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ.

ಇದರಿಂದ ಈ ಸೌಲಭ್ಯಕ್ಕೆ ಆರ್ಹ ದೇಶದ ನಿವೃತ್ತರು ಒಂದು ವರ್ಷ ಮೊದಲೇ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಉಡುಪಿ ಜಿಲ್ಲಾ ನಿವೃತ್ತರ ಸಂಘದ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News