ಕಾಸರಗೋಡು ಜಿಲ್ಲೆಯಲ್ಲಿ ಸೆ.14ರಂದು 'ಹಕ್ಕುಪತ್ರ ಮೇಳ'

Update: 2021-09-09 10:18 GMT

ಕಾಸರಗೋಡು, ಸೆ.9:  ಕೇರಳ ಸರಕಾರದ ನೂರು ದಿನ ಕಾರ್ಯಕ್ರಮದಂಗವಾಗಿ 'ಎಲ್ಲರಿಗೂ ಭೂಮಿ' ಎಂಬ ಗುರಿಯೊಂದಿಗೆ ಜಿಲ್ಲೆಯಲ್ಲಿ ಸೆ.14ರಂದು ಹಕ್ಕುಪತ್ರ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಕ್ಕು ಪತ್ರ ನಡೆಯಲಿದೆ. ಜಿಲ್ಲಾ ಮಟ್ಟದ ಉದ್ಘಾಟನೆ ಅಂದು ಪೂರ್ವಾಹ್ನ 11:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಹ್ಮದ್ ದೇವರ್ ಕೋವಿಲ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಸಿ.ಎಚ್.ಕುಂಞಂಬು ಮೊದಲಾದವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಮಂಜೇಶ್ವರ ತಾಲೂಕು ಮಟ್ಟದ ಮೇಳವನ್ನು ಶಾಸಕ ಎ.ಕೆ.ಎಂ.ಅಶ್ರಫ್, ಹೊಸದುರ್ಗದಲ್ಲಿ ಶಾಸಕ ಇ.ಚಂದ್ರಶೇಖರ ನ್, ವೆಳ್ಳರಿಕುಂಡುವಿನಲ್ಲಿ ಶಾಸಕ ಎಂ.ರಾಜಗೋಪಾಲ್  ಮೇಳ ವನ್ನು ಉದ್ಘಾಟಿಸುವರು.

ಕೋವಿಡ್ ಮಾನದಂಡ ಪಾಲಿಸಿ ಕಾರ್ಯಕ್ರಮ ನಡೆಯಲಿದ್ದು, ಆಯ್ದ ಕೆಲವರಿಗೆ ಹಾಗೂ ಉಳಿದ ವರಿಗೆ ಎರಡು ದಿನಗಳೊಳಗೆ ಸಂಬಂಧಪಟ್ಟ ಗ್ರಾಮ ಕಚೇರಿಯ ಮೂಲಕ ಹಕ್ಕುಪತ್ರ ವಿತ ರಿ ಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪ ಜಿಲ್ಲಾಧಿಕಾರಿ ಕೆ.ರವಿಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News