ಸೆ.11 ಮತ್ತು ಸೆ. 14ರಂದು ದ.ಕ. ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ

Update: 2021-09-09 13:30 GMT

ಮಂಗಳೂರು, ಸೆ.9: ನಂದಿಗುಡ್ಡ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಸೆ.11ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.

ಹಾಗಾಗಿ ನಂದಿಗುಡ್ಡ, ಅತ್ತಾವರ ಕೆ.ಎಂ.ಸಿ., ಅತ್ತಾವರ 6ನೇ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆ ಅವಧಿಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

ಕೆಪಿಟಿಸಿಎಲ್‌ನಿಂದ ನಂದಿಕೂರು-ಮುಲ್ಕಿ ವಿದ್ಯುತ್ ಮಾರ್ಗದಲ್ಲಿ ಸೆ.14ರ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮುಲ್ಕಿ, ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ ಕೆ.ಎಸ್. ರಾವ್ ನಗರ, ಕೊಳ್ನಾಡು ಇಂಡಸಟ್ರೆಿಯಲ್ ಏರಿಯಾ, ಬಪ್ಪನಾಡು, ಕುಬೆವೂರು, ಶಿಮಂತೂರು, ಅತಿಕಾರಿಬೆಟ್ಟು, ಕಿನ್ನಿಗೋಳಿ, ಮೂರು ಕಾವೇರಿ, ಪುನರೂರು, ಐಕಳ, ದಾಮಸ್‌ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಹಳೆಯಂಗಡಿ, ಇಂದಿರಾನಗರ, ತೋಕೂರು, ಪಾವಂಜೆ, ಚೇಳಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಸೆ.14ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಳಲಿ, ಭವಂತಿಬೆಟ್ಟು, ಸಾನ್‌ಬೆಟ್ಟು, ಮುಲ್ಲಗುಡ್ಡೆ, ನಾಡಾಜೆ, ಚನ್ನರಪಾದೆ, ಸಾದೂರು, ಅಡ್ಡೂರು, ತಾರಿಕರಿಯ, ಕಾಂಜಿಲಕೋಡಿ, ಕೈಕಂಬ ಪೇಟೆ, ಕಂದಾವರ, ಸುರಭಿಕಟ್ಟೆ, ಹೊಯಿಗೆಪದವು, ಮಟ್ಟಿ, ಕುಂದೋಡಿ, ಪದ್ರೆಂಗಿ, ಕೋರ್ಡೆಲ್, ಬ್ರಿಂಡೆಲ್, ಕಲ್ಲಾಡಿ, ಕುಪ್ಪೆಪದವು, ಕಿಲೆಂಜಾರು, ಮುರಾ, ಮುತ್ತೂರು, ಮಾರ್ಗದಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

ಸೆ.14ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮೂಡುಬಿದಿರೆ ವಿದ್ಯುತ್‌ಉಪಕೇಂದ್ರದಿಂದ ಹೊರಡುವ ಪುಚ್ಚೆಮೊಗರು ಮತ್ತು ತಾಕೊಡೆ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವುದರಿಂದ ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News