ಸೆ.8 ರಿಂದ 15 : ಮಂಗಳೂರಿನ ಮಲಬಾರ್ ಗೋಲ್ಡ್ ನಲ್ಲಿ ಸಿಲ್ವರ್ ಶೋ

Update: 2021-09-09 15:11 GMT

ಮಂಗಳೂರು : ಜಗತ್ತಿನ ಅತಿದೊಡ್ಡ  ಚಿನ್ನ ಮತ್ತು ವಜ್ರದ ಮಳಿಗೆಗಳಲ್ಲಿ ಒಂದೆಂಬ ಖ್ಯಾತಿ ಪಡೆದಿರುವ  ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್  ಮಂಗಳೂರು  ಶೋರೂಮ್ ನಲ್ಲಿ  ಬೆಳ್ಳಿ  ಆಭರಣಗಳು  ಮತ್ತು ವಸ್ತುಗಳ 'ಸಿಲ್ವರ್ ಶೋ'  ಪ್ರದರ್ಶನ  ಸೆಪ್ಟೆಂಬರ್ 8 ರಿಂದ 15 ರವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಪ್ರತಿ 5,000 ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಖರೀದಿಸುವಾಗ ಉಚಿತವಾಗಿ 500 ರೂ. ಮೌಲ್ಯದ ಸ್ಟರ್ಲಿಂಗ್ ಬೆಳ್ಳಿ ಆಭರಣವನ್ನು ಉಚಿತವಾಗಿ ನೀಡುತ್ತದೆ.  ಆಕರ್ಷಕ ಹಾಗು ಅತ್ಯುತ್ತಮ ಗುಣಮಟ್ಟದ ಬೆಳ್ಳಿ ಆಭರಣಗಳು ಮತ್ತು ವಸ್ತುಗಳ ವಿಶಾಲ ಸಂಗ್ರಹ ಇಲ್ಲಿ ಗ್ರಾಹಕರನ್ನು ಸೆಳೆಯಲಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸಗಳ ಗುಣಮಟ್ಟ ಕುರಿತ ಖಾತರಿ ಇರುವ  ಬೆಳ್ಳಿ ಆಭರಣಗಳು ಇಲ್ಲಿ ಲಭ್ಯ ಇರುತ್ತವೆ  ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಗ್ರಾಹಕರಿಗೆ ಈ ವಿಶೇಷ ಪ್ರದರ್ಶನದ ವೇಳೆ 10 ಭರವಸೆಗಳನ್ನು ನೀಡುತ್ತದೆ.  ನಿಖರವಾದ ಉತ್ಪಾದನಾ ವೆಚ್ಚ, ಹರಳಿನ ತೂಕ, ನಿವ್ವಳ ತೂಕ ಮತ್ತು ಆಭರಣದ ಹರಳಿನ ಶುಲ್ಕ ತೋರಿಸುವ ಪ್ರೈಸ್ ಟ್ಯಾಗ್, ಆಭರಣಗಳಿಗೆ ಜೀವಮಾನದ ಉಚಿತ ನಿರ್ವಹಣೆ, ಹಳೆಯ ಚಿನ್ನದ ಆಭರಣಗಳನ್ನು ಮರು ಮಾರಾಟ ಮಾಡುವಾಗ ಚಿನ್ನಕ್ಕೆ 100 % ಮೌಲ್ಯ ಮತ್ತು ವಿನಿಮಯಕ್ಕೆ ಶೂನ್ಯ ಕಡಿತ, 100% ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ  ಬಿಐಎಸ್ ಹಾಲ್‌ಮಾರ್ಕಿಂಗ್, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳು ಜಾಗತಿಕ ಮಾನದಂಡಗಳ ಪ್ರಕಾರ  28 ಪಾಯಿಂಟ್‌ಗಳ ಗುಣಮಟ್ಟದ ಪರಿಶೀಲನೆ, ಬೈಬ್ಯಾಕ್ ಗ್ಯಾರಂಟಿ, ಕ್ಯಾರೆಟ್ ವಿಶ್ಲೇಷಕ ಗುಣಮಟ್ಟ, ಜೀವಮಾನ ನಿರ್ವಹಣೆಯನ್ನು  ಖಚಿತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News