ವಲಸೆ ಕಾರ್ಮಿಕರ ಬೆರಳಚ್ಚು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಉಡುಪಿ ಡಿಸಿಗೆ ಮನವಿ

Update: 2021-09-11 13:38 GMT

ಉಡುಪಿ, ಸೆ.11: ಪಡಿತರ ಚೀಟಿ ನವೀಕರಣಕ್ಕೆ ಬೆರಳಚ್ಚು ಪಡೆಯುವ ಸಲುವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಾದ್ಯಂತ ವಾಸಿಸುತ್ತಿರುವ ಉತ್ತರ ಕರ್ನಾಟಕದ ಕಾರ್ಮಿಕರಿಗೆ ತಮ್ಮ ಊರುಗಳಿಂದ ಕರೆ ಬರುತ್ತಿದ್ದು, ಇದರಿಂದ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡು ವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆರಳಚ್ಚು ನೀಡಲು ತಮ್ಮ ತಮ್ಮ ಊರುಗಳಿಗೆ ಹೋಗಿ ಬರಲು ತುಂಬಾ ತೊಂದರೆಯಾಗುತ್ತಿದೆ. ಆದುದರಿಂದ ವಲಸೆ ಕಾರ್ಮಿಕರಿಗೆ ಆಗುತ್ತಿ ರುವ ಸಂಕಷ್ಟಗಳನ್ನು ನಿವಾರಿಸಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಮನವಿಯಲ್ಲಿ ಒತ್ತಾಯಿಸಿದೆ.

ಮನವಿಗೆ ಸ್ಪಂದಿಸಿದ ಡಿಸಿ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ನಿಯೋಗ ದಲ್ಲಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಉಡುಪಿ ಮತ್ತು ದಕ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ಬಸವರಾಜ್ ಐಹೊಳೆ, ಕುಮಾರ್ ಪ್ರಸಾದ್, ಸಿದ್ದಪ್ಪ ಪೂಜಾರಿ, ಮಹೇಶ್ ಗುಂಡಿಬೈಲು, ಮಹಿಳಾ ಬಳಗದ ಸವಿತಾ ನೋಟಗಾರ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News