​ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ

Update: 2021-09-13 16:47 GMT

ಮಂಗಳೂರು, ಸೆ.13: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಚುನಾವಣಾ ಸಮಿತಿಯ ಮಾಜಿ ಅಧ್ಯಕ್ಷ , ಮಾಜಿ ಲೋಕಸಭಾ ಸದಸ್ಯ, ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

ಯುವ ಕಾಂಗ್ರೆಸ್‌ನ ಉಡುಪಿ ಬ್ಲಾಕ್ ಅಧ್ಯಕ್ಷರಾಗಿ, ಅವಿಭಜಿತ ದ.ಕ. ಜಿಲ್ಲಾಾ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ, 1980ರಲ್ಲಿ ಉಡುಪಿ ಲೋಕಸಭಾ ಸದಸ್ಯರಾಗಿ, ರಾಜೀವ್ ಗಾಂಧಿಯ ಪಾರ್ಲಿಮೆಂಟರಿ ಕಾರ್ಯದರ್ಶಿಯಾಗಿ, ಕೇಂದ್ರದ ಯುಪಿಎ ಸರಕಾರದಲ್ಲಿ ಸಚಿವರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪಕ್ಷದ ಕಟ್ಟಕಡೆಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರದ ಮಟ್ಟದ ನಾಯಕರುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಕೊಂಡು ಪ್ರತಿಯೊಬ್ಬ ಕಾರ್ಯಕರ್ತರಿಗೂ ಉತ್ತೇಜನ ನೀಡುವ ಮೂಲಕ ಪಕ್ಷ ಸಂಘಟನೆಗೆ ರಾಷ್ಟ್ರ ಮಟ್ಟದಲ್ಲಿ ಶ್ರಮಿಸಿದ್ದ ಶ್ರೇಷ್ಠ ನಾಯಕರಾಗಿದ್ದರು. ಅವರ ಅಗಲಿಕೆ ನಮಗೆ ಆಘಾತ ಉಂಟುಮಾಡಿದೆ. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ-ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಯು.ಬಿ.ವೆಂಕಟೇಶ್, ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಶಾಸಕ ಯು.ಟಿ.ಖಾದರ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಮಾಜಿ ವಿಧಾನ ಪರಿಷತ್ ಸದಸ್ಯ ಮುಹಮ್ಮದ್ ಮಸೂದ್, ಮಾಜಿ ಶಾಸಕರಾದ ವಿಜಯ್ ಕುಮಾರ್ ಶೆಟ್ಟಿ, ಮೊಯ್ದಿನ್ ಬಾವಾ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ವಸಂತ್ ಬಂಗೇರಾ, ಜೆ. ಆರ್.ಲೋಬೊ, ಪಿ.ವಿ ಮೋಹನ್, ಮಿಥುನ್ ರೈ, ಡಾ.ರಘು, ಕೋಡಿಜಾಲ್ ಇಬ್ರಾಹೀಂ, ಕಣಚೂರು ಮೋನು, ಸದಾಶಿವ ಉಳ್ಳಾಲ್, ಎ.ಸಿ ಭಂಡಾರಿ, ತೇಜೋಮಯ, ಬಿ.ಎಚ್. ಖಾದರ್, ಪ್ರಸಾದ್ ರಾಜ್ ಕಾಂಚನ್, ವೆಂಕಪ್ಪಗೌಡ, ಜಿ.ಎ. ಬಾವಾ, ಹೇಮನಾಥ್ ಶೆಟ್ಟಿ, ಮುಹಮ್ಮದ್ ಮೋನು, ಕೆ.ಹರಿನಾಥ್, ಭರತ್ ಮುಂಡೋಡಿ, ಅಶ್ವಿನ್ ಕುಮಾರ್ ರೈ, ನಿತ್ಯಾನಂದ ಮುಂಡೋಡಿ, ಶಶಿಧರ್ ಹೆಗ್ಡೆ, ಕಳ್ಳಿಗೆ ತಾರನಾಥ್ ಶೆಟ್ಟಿ, ವಿವೇಕ್ ರಾಜ್ ಪೂಜಾರಿ, ಆರ್.ಕೆ.ಪೃಥ್ವಿರಾಜ್, ಟಿ.ಎಂ.ಶಹೀದ್, ಭರತ್ ಮುಂಡೋಡಿ, ಕವಿತಾ ಸನಿಲ್, ವಹಿದಾ ಇಸ್ಮಾಯೀಲ್, ಪುರುಷೋತ್ತಮ ಚಿತ್ರಾಪುರ, ಮಹಾಬಲ ಮಾರ್ಲ, ಎಂ.ಎಸ್.ಮುಹಮ್ಮದ್, ರಕ್ಷಿತ್ ಶಿವರಾಮ್, ಲುಕ್ಮಾನ್ ಬಂಟ್ವಾಳ, ಶಾಲೆಲ್ ಪಿಂಟೊ, ಪಿ.ಪಿ ವರ್ಗೀಸ್, ಬಿ.ಜಿ.ಸುವರ್ಣ, ಅಬ್ದುಲ್ ರವೂಫ್, ನವೀನ್ ಡಿಸೋಜ, ಗಣೇಶ್ ಪೂಜಾರಿ, ಖಾದರ್ ಏರ್‌ಪೋರ್ಟ್, ಸುರೇಂದ್ರ ಕಂಬಳಿ, ರಂಜನ್ ಗೌಡ, ಶೈಲೇಶ್ ಕುಮಾರ್, ಡಾ.ರಾಜಾರಾಂ, ಎಂ.ಬಿ ವಿಶ್ವನಾಥ್ ರೈ, ಪ್ರಕಾಶ್ ಸಾಲ್ಯಾನ್, ಜೆ.ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್, ವೆಲೇರಿಯನ್ ಸಿಕ್ವೇರಾ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಕಡಬ, ಪಿ.ಸಿ ಜಯರಾಮ್, ಪ್ರಶಾಂತ್ ಕಾಜವ, ಸದಾಶಿವ ಶೆಟ್ಟಿ, ಮುಹಮ್ಮದ್ ಕುಂಜತ್ತಬೈಲ್, ಶಬ್ಬೀರ್ .ಎಸ್, ಸಂತೋಷ್ ಶೆಟ್ಟಿ, ನಝೀರ್ ಬಜಾಲ್, ನೀರಜ್‌ಚಂದ್ರ ಪಾಲ್, ಶುಭೋದಯ ಆಳ್ವ, ನಿತ್ಯಾನಂದ ಶೆಟ್ಟಿ, ಧನಂಜಯ ಮಟ್ಟು, ಮಯಿಲಪ್ಪ ಸಾಲ್ಯಾನ್, ಚಂದ್ರಹಾಸ ಕರ್ಕೇರಾ, ಸುದರ್ಶನ್ ಜೈನ್, ಮುಹಮ್ಮದ್ ಬಡಗನ್ನೂರ್, ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸತ್ತಾರ್ ಅಡ್ಯಾರ್, ಅನಿತಾ ಹೇಮನಾಥ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಶಾಹುಲ್ ಹಮೀದ್, ಅಲಿಸ್ಟ್ ಡಿಕುನ್ನ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜೋಕ್ಕಿಂ ಡಿಸೋಜ, ಶೇಖರ್ ಕುಕ್ಕೇಡಿ, ಆರೀಫ್ ಬಂದರ್, ಲಾರೆನ್ಸ್ ಡಿಸೋಜ, ಮೆರಿಲ್ ರೇಗೋ, ರಮಾನಂದ ಪೂಜಾರಿ, ಆಶೀತ್ ಪಿರೇರಾ, ಗಿರೀಶ್ ಆಳ್ವ, ಸವಾದ್ ಸುಳ್ಯ, ಅಪ್ಪಿ, ಮೋಹನ್ ಗೌಡ, ಬಿಲಾಲ್ ಬೆಂಗ್ರೆ, ಫಾರೂಕ್ ಉಳ್ಳಾಲ್, ನಾಗೇಂದ್ರ ಕುಮಾರ್, ಪದ್ಮನಾಭ ಅಮೀನ್, ಜೆಸಿಂತಾ ವಿಜಯ ಆಲ್ಫ್ರೆಡ್, ರಝಾಕ್ ಕುಕ್ಕಾಜೆ, ಭಾಸ್ಕರ್.ಕೆ, ಎ.ಸಿ.ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ, ಪದ್ಮಪ್ರಸಾದ್ ಜೈನ್, ಅನಿಲ್ ಕುಮಾರ್, ಅಬ್ದುಲ್‌ಲತೀಫ್, ಕೇಶವ ಮರೋಳಿ, ಸಂಶುದ್ದೀನ್ ಕುದ್ರೋಳಿ, ಲ್ಯಾನ್ಸಿ ಲಾಟ್‌ಪಿಂಟೋ, ಝೀನತ್ ಸಂಶುದ್ದೀನ್ ಬಂದರ್, ಅಶ್ರಫ್ ಬಜಾಲ್, ಸಿ.ಎಂ ಮುಸ್ತಫಾ, ಜಯಶೀಲ ಅಡ್ಯಂತಯಾ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಎನ್‌ಇ ಮುಹಮ್ಮದ್ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ದುಖಃವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ನೀಡಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕದ ಓರ್ವ ಸಮರ್ಥ, ಹಿರಿಯ ರಾಜಕಾರಣಿಯನ್ನು ನಾಡು ಕಳೆದು ಕೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಕೆಲವೇ ಕೆಲವು ಮುತ್ಸದ್ದಿ ರಾಜಕಾರಣಿಗಳಲ್ಲಿ ಆಸ್ಕರ್ ಫೆರ್ನಾಂಡಿಸ್ ಓರ್ವರಾಗಿದ್ದಾರೆ. ಅವರ ಅಗಲಿಕೆ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ಕಾಂಗ್ರೆಸ್ ಪಕ್ಷದ ಒಂದು ಮೂಲ ಕೊಂಡಿ ಕಳಚಿ ಹೋಗಿದೆ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News