ಅಭಿವೃದ್ಧಿ ಕಾಮಗಾರಿ ಹಿನ್ನೆಲೆ: ನವಭಾರತ ಜಂಕ್ಷನ್‌ನಿಂದ ನಾಗನಕಟ್ಟೆವರೆಗೆ ವಾಹನ ಸಂಚಾರ ನಿಷೇಧ

Update: 2021-09-13 13:03 GMT

ಮಂಗಳೂರು ಸೆ.13: ನಗರದ ನವಭಾರತ ಜಂಕ್ಷನ್‌ನಿಂದ ನಾಗನಕಟ್ಟೆವರೆಗೆ (ಡೊಂಗರಕೇರಿ ವೆಂಕಟರಮಣ ದೇವಸ್ಥಾನ ರಸ್ತೆ) ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದರಿಂದ ನವೆಂಬರ್ 7ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ನಾಗನಕಟ್ಟೆ ಕಡೆಯಿಂದ ಬರುವ ವಾಹನಗಳು ಗದ್ದಕೇರಿ ಜಂಕ್ಷನ್ ಮೂಲಕ ಮುಂದುವರೆದು ರಮಣ ಪೈ ಹಾಲ್ ಸಮೀಪದ ರಸ್ತೆಯಲ್ಲಿ ಬಂದು ನವಭಾರತ್ ಸರ್ಕಲ್ ಮುಖಾಂತರ ಸಂಚರಿಸುವುದು.

ನವಭಾರತ್ ಜಂಕ್ಲಿನ್‌ನಿಂದ ಡೊಂಗರಕೇರಿಗೆ ಹೋಗುವ ವಾಹನಗಳು ರಮಣ ಪೈ ಹಾಲ್ ಮೂಲಕ ಗದ್ದೆಕೇರಿ ಜಂಕನ್‌ಕಡೆಗೆ ಸಂಚರಿಸುವುದು.
ಕಾಮಗಾರಿ ವೇಳೆ ನವಭಾರತ ಜಂಕ್ಷನ್‌ನಿಂದ ನಾಗನಕಟ್ಟೆವರೆಗೆ (ಡೊಂಗರಗೇರಿ ವೆಂಕಟರಮಣ ದೇವಸ್ಥಾನ ರಸ್ತೆ) ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಈ ರಸ್ತೆಯಲ್ಲಿ ಅವಶ್ಯವುಳ್ಳ ಸೂಚನಾ ಫಲಕಗಳನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಅಳವಡಿಸಬೇಕು ಮತ್ತು ಸುಗಮ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News