ಉಡುಪಿ ಜಿಲ್ಲಾಡಳಿತದಿಂದ ಕೋವಿಡ್ ಸಹಾಯವಾಣಿ

Update: 2021-09-13 14:36 GMT

ಉಡುಪಿ, ಸೆ.13: ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ಈಗಾಗಲೇ ಕರೋನಾ ಸೋಂಕಿತರನ್ನು ಕಡ್ಡಾಯವಾಗಿ ಸಾಂಸ್ದಿಕ ಕ್ವಾರಂಟೈನ್ ಗೆ ಸ್ದಳಾಂತರ, ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡುವುದು ಹಾಗೂ ಇತರ ಮುಂಜಾಗೃತ ಕ್ರಮಗಳಿೆ ಸಂಬಂಧಿಸಿ ಆದೇಶ ಹೊರಡಿಸಲಾಗಿದೆ.

ಆದರೂ ಕೊರೋನಾ ಬಾಧಿತ ವ್ಯಕ್ತಿಗಳು ಕೋವಿಡ್ -19 ರ ನಿಯಮಗಳನ್ನು ಉಲ್ಲಂಸಿ, ನಿರಾಯಾಸವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಇದು ಜಿಲ್ಲೆಯಲ್ಲಿ ಮತ್ತಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಆದುದರಿಂದ ಈ ಬಗ್ಗೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಲು ಹಾಗೂ ಸಾರ್ವಜನಿಕರೇ ಸ್ವಯಂ ಕೋವಿಡ್-19ನ್ನು ನಿಯಂತ್ರಿ ಸುವಲ್ಲಿ ಜಾಗೃತರನ್ನಾಗಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಜಿಲ್ಲೆಯಲ್ಲಿ ಕೊರೋನಾ ಬಾಧಿತ ವ್ಯಕ್ತಿಗಳು ಕೋವಿಡ್-19 ನಿಯಮಗಳನ್ನು ಉಲ್ಲಂಸಿ ಓಡಾಟ ನಡೆಸುವುದು ಕಂಡುಬಂದಲ್ಲಿ ಆ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ಜಿಲ್ಲಾಡಳಿತದಿಂದ ಸ್ದಾಪಿಸಿರುವ ಕೋವಿಡ್ -19 ಸಹಾಯವಾಣಿಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದಾಗಿದೆ.

ಅಲ್ಲದೇ, ಕೋವಿಡ್ ಕೇರ್ ಸೆಂಟರ್, ಹೋಮ್ ಐಸೋಲೇಶನ್ ಹಾಗೂ ಕೋವಿಡ್-19ಗೆ ಸಂಬಂಧಿಸಿದ ಇನ್ನಿತರ ಮಾಹಿತಿಯನ್ನು ಪಡೆಯಲು ಅಥವಾ ಯಾವುದಾದರು ದೂರುಗಳನ್ನು ಸಲ್ಲಿಸಲು ಸಾರ್ವಜನಿಕರು ಕೋವಿಡ್ -19 ಸಹಾಯವಾಣಿ ಸಂಖ್ಯೆ: 9663957222 ಸೇವೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News