ಉಡುಪಿ ಜಿಲ್ಲೆಯ 113 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2021-09-16 15:10 GMT

ಉಡುಪಿ, ಸೆ.16: ಜಿಲ್ಲೆಯಲ್ಲಿ ಗುರುವಾರ ಒಟ್ಟು 113 ಮಂದಿಯಲ್ಲಿ ಹೊಸ ದಾಗಿ ಕೊರೋನ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಕೇವಲ 14 ಮಂದಿ ಸೋಂಕಿನಿಂದ ಮುಕ್ತರಾದರೆ, ಸೋಂಕಿಗೆ ಇನ್ನೂ ಸಕ್ರಿಯರಾಗಿರುವವರ ಸಂಖ್ಯೆ 1625ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಜಿಲ್ಲೆಯಲ್ಲಿ ಯಾರೂ ಸೋಂಕಿನಿಂದ ಮೃತಪಟ್ಟಿಲ್ಲ. ಸೋಂಕು ದೃಢಪಟ್ಟ 113 ಮಂದಿಯಲ್ಲಿ 54 ಮಂದಿ ಪುರುಷರು ಹಾಗೂ 59 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 70 ಮಂದಿ ಉಡುಪಿ ತಾಲೂಕು, 12 ಮಂದಿ ಕುಂದಾಪುರ ಹಾಗೂ 29 ಮಂದಿ ಕಾರ್ಕಳ ತಾಲೂಕಿನವರು. ಇತರ ಇಬ್ಬರು ಹೊರಜಿಲ್ಲೆಯವರು. ಇವರಲ್ಲಿ 26 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 87 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಜಿಲ್ಲೆಯಲ್ಲಿ ಯಾರೂ ಸೋಂಕಿನಿಂದ ಮೃತಪಟ್ಟಿಲ್ಲ. ಸೋಂಕು ದೃಢಪಟ್ಟ 113 ಮಂದಿಯಲ್ಲಿ 54 ಮಂದಿ ಪುರುಷರು ಹಾಗೂ 59 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 70 ಮಂದಿ ಉಡುಪಿ ತಾಲೂಕು, 12 ಮಂದಿ ಕುಂದಾಪುರ ಹಾಗೂ 29 ಮಂದಿ ಕಾರ್ಕಳ ತಾಲೂಕಿನವರು. ಇತರ ಇಬ್ಬರು ಹೊರಜಿಲ್ಲೆಯವರು. ಇವರಲ್ಲಿ 26 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 87 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ 14 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 73,376ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 7598 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 75,461ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,70,569 ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

2101 ಮಂದಿಗೆ ಲಸಿಕೆ ವಿತರಣೆ:  ಜಿಲ್ಲೆಯಲ್ಲಿ ಗುರುವಾರ ಒಟ್ಟು 2101 ಮಂದಿ ಕೋವಿಡ್-19 ಲಸಿಕೆ ಪಡೆದಿದ್ದಾರೆ. ಇವರಲ್ಲಿ 1159 ಮಂದಿ ಮೊದಲ ಡೋಸ್ ಹಾಗೂ 942 ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 430 ಮಂದಿ ಮೊದಲ ಹಾಗೂ 499 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 729 ಮಂದಿಗೆ ಮೊದಲ ಹಾಗೂ 443 ಮಂದಿಗೆ ಎರಡೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಇಂದು ಸಂಜೆಯವರೆಗೆ ಜಿಲ್ಲೆಯಲ್ಲಿ ಒಟ್ಟು 8,44,748 ಮಂದಿ ಮೊದಲ ಡೋಸ್‌ನ್ನು ಪಡೆದರೆ, 3,30,935 ಮಂದಿ ಎರೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News