ಚೆಂಬುಗುಡ್ಡೆ: ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ

Update: 2021-10-06 16:21 GMT

ತೊಕ್ಕೊಟ್ಟು : ಮಂಗಳೂರು ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟಿನಿಂದ ಕೋಣಾಜೆಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಇದನ್ನು ಖಂಡಿಸಿ ಡಿವೈಎಫ್ಐ ಉಳ್ಳಾಲ ವಲಯ ನೇತೃತ್ವದಲ್ಲಿ ಚೆಂಬುಗುಡ್ಡೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿಕೆ ಇಮ್ತಿಯಾಝ್, ತೊಕ್ಕೊಟ್ಟಿನಿಂದ ಹಿಡಿದು ಚೆಂಬುಗುಡ್ಡೆ, ಬಬ್ಬುಕಟ್ಟೆ, ಕುತ್ತಾರ್ ಮತ್ತಿತ್ತರ ಪ್ರದೇಶದಲ್ಲಿ ದೊಡ್ಡ-ದೊಡ್ಡ ಗುಂಡಿಗಳಿಂದ ಕೂಡಿದ್ದು ಆ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರ ಸುಗಮ ಸಂಚಾರಕ್ಕೆ ಅಡಚಣೆಯಾಗಿವೆ. ಮಾತ್ರವಲ್ಲ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಗಳಾಗುವ ಸಾಧ್ಯತೆಗಳು ಬಹಳಷ್ಟಿವೆ. ಅದೇ ರೀತಿ ಈ ರಸ್ತೆಯಲ್ಲಿ ದಿನವಿಡೀ ವಾಹನ ಸಂಚಾರ ದಟ್ಟಣೆ ವಿಪರೀತವಾಗಿದ್ದು ವಿಶವ್ವಿದ್ಯಾಲಯಕ್ಕೆ, ಮೆಡಿಕಲ್ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ, ಐಟಿ ಕಂಪೆನಿಗಳಿಗೆ ತೆರಳುವ ಜನ ಸಾಮಾನ್ಯರು, ವಿದ್ಯಾರ್ಥಿಗಳು, ರೋಗಿಗಳು ದಿನನಿತ್ಯ  ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಪ್ರಾಣ ರಕ್ಷಿಸಲು ದಾವಿಸುವ ಜೀವ ರಕ್ಷಕ ವಾಹನಗಳ ಸಮಯಕ್ಕೆ ಸರಿಯಾಗಿ ತಲುಪಲು ಈ ಕೆಟ್ಟು ಹೋಗಿರುವ ರಸ್ತೆಗಳಿಂದ ಸಾಧ್ಯವಾಗದೇ ಪ್ರಾಣ ಕಳೆದುಕೊಳುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನಲೆಯಲ್ಲಿ ಜನಸಾಮಾನ್ಯರ ಬಹುಮುಖ್ಯ ರಸ್ತೆಯಾಗಿರುವ ತೊಕ್ಕೊಟ್ಟಿನಿಂದ ಕೊಣಾಜೆವರೆಗೆ ಕೆಟ್ಟು ನಿಂತಿರುವ ರಸ್ತೆಯನ್ನು ಕೂಡಲೇ ಸರಿಪಡಿಸದಿದ್ದರೆ ಶಾಸಕರ ಮನೆಯ ಮುಂದೆ ಬೃಹತ್ ಪ್ರತಿಭಟನೆಯನ್ನು ಮಾಡಲಾಗುದೆಂದು ಎಚ್ಚರಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ನಿತಿನ್ ಕುತ್ತಾರ್ ಮಾತಾಡಿ ರಸ್ತೆಯ ಗುತ್ತಿಗೆ ಪಡೆದವರು ಅಧಿಕಾರಿ ವರ್ಗದವರ ಮಾತಿಗೆ ಬೆಲೆ ಕೊಡದೆ ಬೇಕಾಬಿಟ್ಟಿ ವರ್ತಿಸುವ ಸ್ಥಿತಿ ನಿರ್ಮಾಣವಾಗಲು ಶಾಸಕರ ಬೇಜವಾಬ್ದಾರಿ ನಡೆಯೇ ಕಾರಣ. ಕೂಡಲೇ ಶಾಸಕರು ಈ ರಸ್ತೆ ದುರಸ್ಥಿನ್ನು ನಡೆಸಲು ಮುಂದಾಗಬೇಕು ಎಂದರು. ಪ್ರ

ತಿಭಟನೆಯಲ್ಲಿ ವಲಯ ಅಧ್ಯಕ್ಷರು ರಫೀಕ್ ಹರೇಕಾಳ, ಡಾ ಜೀವನ್ ರಾಜ್, ರಝಾಕ್ ಮೊಂಟೆಪದವು, ಪ್ರಜ್ಞೆಶ್ ಚಂಬುಗುಡ್ಡೆ , ಸಂಕೇತ್ ಕಂಪ, ಕಟ್ಟಡ ಕಾರ್ಮಿಕರ ಮುಖಂಡರು ಇಬ್ರಾಹಿಂ ಮದಕ, ಜಯರಾಮ್ ತೇವುಲ, ಎಸ್ ಎಫ್ ಐ ಮುಖಂಡರಾದ ವಿಕಾಸ್ ಕುತ್ತಾರ್, ಬಶೀರ್ ಹರೇಕಳ ಭಾಗವಹಿಸಿದ್ದು ಸುನಿಲ್ ತೇವುಲ ಸ್ವಾಗತಿಸಿ, ರಝಕ್ ಮುಡಿಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News