ಪದ್ಮಶ್ರೀ ಜಿ.ಎನ್.ದೇವಿ ಆಯ್ದ ಬರಹಗಳು ಕೃತಿ ಲೋಕಾರ್ಪಣೆ
ಉಡುಪಿ, ಅ.29: ಪ್ರಸಿದ್ಧ ಸಾಹಿತ್ಯ ವಿಮರ್ಶಕ, ಭಾಷಾ ಶಾಸಜ್ಞ, ಮಾನವ ಶಾಸಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಶೋಧಕ ಡಾ.ಗಣೇಶ್ ಎನ್. ದೇವಿ ಅವರ ‘ಜಿ.ಎನ್.ದೇವಿ ಆಯ್ದ ಬರಹ’ಗಳು ಕೃತಿಯನ್ನು ಖ್ಯಾತ ರಂಗಕರ್ಮಿ ಡಾ.ಶ್ರೀಪಾದ ಭಟ್ ಅವರು ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ ಮಂಟಪದಲ್ಲಿ ಲೋಕಾರ್ಪಣೆಗೊಳಿಸಿದರು.
ಎಂಜಿಎಂ ಕಾಲೇಜು ಹಾಗೂ ಬೆಂಗಳೂರಿನ ಕ್ರಿಯಾ ಮಾಧ್ಯಮ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕ್ರಿಯಾ ಮಾದ್ಯಮ ಪ್ರಕಟಿಸುತ್ತಿರುವ ‘ಬೆಳಕಿನ ಬೆಳೆ’ ಮಾಲಿಕೆಯಲ್ಲಿ ಎಂಟನೇ ಕೃತಿ ಇದಾಗಿದೆ. ಜಿ.ಎನ್.ದೇವಿ ಅವರ ಮೂಲ ಇಂಗ್ಲೀಷ್ ಲೇಖನಗಳನ್ನು ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎಂ.ಜಿ.ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿ ಬಿಡುಗಡೆಗೊಳಿಸಿದ ಡಾ.ಶ್ರೀಪಾದ ಭಟ್, ಕೃತಿಯ ಪ್ರಮುಖ ಭಾಗಗಳನ್ನು ವಾಚಿಸಿದರು. ದೇವಿ ಅವರ ಚಿಂತನ ಬರಹಗಳನ್ನು ಓದಿದಾಗ ದೇಹಕ್ಕೆ ಶತರೂಪ ಧಾರಣೆ ಮಾಡುವ ಶಕ್ತಿ ಬರುತ್ತೆ. ಏಕಲವ್ಯನಿಗಾದ ಗಾಯ ಸಮಾಜಕ್ಕಾದ ಗಾಯ ಎಂಬುದು ಅರಿವಿಗೆ ಬರುತ್ತೆ ಎಂದರು.
ಬೆಳಕಿನ ಬೆಳೆ ಮಾಲಿಕೆಯಲ್ಲಿ ರವೀಂದ್ರನಾಥ ಠಾಗೂರ್, ಅಮರ್ತ್ಯಸೇನ್‌ರಂಥ ದೇಶದ ಖ್ಯಾತನಾಮ ಚಿಂತಕರ 50 ಕೃತಿಗಳು ಹೊರಬರಲಿದ್ದು, ಇದರಲ್ಲಿ ತನ್ನ ಲೇಖನಗಳ ಕೃತಿ ಸೇರಿರುವುದರಿಂದ ಹೆಮ್ಮೆ ಎನಿಸುತ್ತಿದೆ. ತನ್ನ ಲೇಖನಗಳನ್ನು ಡಾ.ಹೆಗಡೆ ಅವರು ಪರಕಾಯ ಪ್ರವೇಶ ಮಾಡಿ ಮಾಂತ್ರಿಕನಂತೆ ಅನುವಾದಿಸಿ ದ್ದಾರೆ ಎಂದರು.
ದೇವಿ ಅವರ ಬರಹಗಳ ಕುರಿತು ಖ್ಯಾತ ಚಿಂತಕ ಡಾ.ರಾಜೇಂದ್ರ ಚೆನ್ನಿ ಅವರು ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ಎಸ್. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅನುವಾದಕ ಡಾ.ಎಂ.ಜಿ.ಹೆಗಡೆ, ಡಾ.ಜಿ.ಎನ್.ದೇವಿ ಅವರನ್ನು ಪರಿಚಯಿಸಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಕಾಶಕ ಬೆಂಗಳೂರು ಕ್ರಿಯಾ ಮಾಧ್ಯಮದ ವಸಂತರಾಜ ಎನ್.ಕೆ. ವಂದಿಸಿದರು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಡಾ.ಪುತ್ತಿ ವಸಂತಕುಮಾರ್ ಕಾರ್ಯಕ್ರಮ ನಿರೂಪಿಸಿದರು.