ಬಿಲ್ಲವ ಸಮಾಜದ ಮೇಲೆ ನಿರಂತರ ದೌರ್ಜನ್ಯ: ಬಿ.ಎನ್.ಶಂಕರ ಪೂಜಾರಿ

Update: 2021-11-07 13:00 GMT

ಉಡುಪಿ, ನ.7: ಬಿಲ್ಲವರು ಒಗ್ಗಟ್ಟಿನಲ್ಲಿ ಇದ್ದರೆ ಯಾರಿಗೂ ನಮ್ಮನ್ನು ಎದುರಿಸುವ ಶಕ್ತಿ ಇಲ್ಲ. ನಮ್ಮ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ನಮ್ಮನ್ನು ಸ್ವಾಭಿಮಾನಿಗಳಾಗಿ ಬದುಕಲು ಬಿಡುತ್ತಿಲ್ಲ. ಸರಕಾರದಿಂದ ಸಿಗುವ ಸೌಲಭ್ಯಗಳು ಸರಿಯಾಗಿ ನಮ್ಮವರಿಗೆ ತಲುಪುತ್ತಿಲ್ಲ. ರಾಜಕೀಯ ಹಾಗೂ ಆರ್ಥಿಕವಾಗಿ ನಮ್ಮ ಸಮಾಜ ಬಹಳಷ್ಟು ದುರ್ಬಲವಾಗಿದೆ ಎಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಆರೋಪಿಸಿದ್ದಾರೆ.

ಬನ್ನಂಜೆ ಬಿಲ್ಲವ ಸೇವಾ ಸಂಘದ ನೇತೃತ್ವದಲ್ಲಿ ರವಿವಾರ ಬನ್ನಂಜೆಯ ಶಿವಗಿರಿ ಸಭಾಭವನದಲ್ಲಿ ಉಡುಪಿ, ಕಾಪು, ಬ್ರಹ್ಮಾವರ ತಾಲೂಕು ಬಿಲ್ಲವ ಸಂಘಗಳ ಪದಾಧಿಕಾರಿಗಳಿಗೆ ಆಯೋಜಿಸಲಾದ ಬಿಲ್ಲವ ಸಮಾಜಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಗಾರವನ್ನು ಉ್ಘಾಟಿಸಿ ಅವರು ಮಾತ ನಾಡುತಿದ್ದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಜಿಲ್ಲಾ ಸಂಯೋಜಕಿ ಡಾ.ತೇಜಸ್ವಿನಿ ಮಾತನಾಡಿ, ರಾಜ್ಯದಲ್ಲಿ ಆಯುಷ್‌ಮಾನ ಕಾರ್ಡ್ ಮಾಡಿದರಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಆದರೆ ಅದರ ಸೌಲಭ್ಯ ಪಡೆದು ಕೊಳ್ಳುವುದರಲ್ಲಿ ನಾವು  ಹಿಂದೆ ಬಿದ್ದಿದ್ದೇವೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ನಗರಸಭೆ ಆರೋಗ್ಯ ಅಧಿಕಾರಿ ಸುಧಾಕರ ಕೋಟ್ಯಾನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದೇವೆಂದ್ರ ಎಸ್. ಬಿರೆದಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ರಾಜ್, ಸುರೇಶ ಬಂಗೇರ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಉಪನ್ಯಾಸಕ ದುಗ್ಗಪ್ಪ ಕಜೆಕಾರ್, ದಿನಕರ ಪೂಜಾರಿ, ಶೇಖರ ಗುಜ್ಜರಬೆಟ್ಟು, ರಾಘವೇಂದ್ರ ಅಮೀನ್, ಸತೀಶ್ ಪೂಜಾರಿ ಅಭಿನಂದನಾ ಭಾಷಣ ಮಾಡಿ ದರು. ಜೊತೆ ಕಾರ್ಯದರ್ಶಿ ಜನಾರ್ದನ ಸಿ.ಕರ್ಕೇರ, ಕೋಶಾಧಿಕಾರಿ ಪಿ.ಕೆ. ಶಂಕರ್, ಸದಸ್ಯರಾದ ಗೋಪಾಲ ಪೂಜಾರಿ, ಶೇಖರ ಪೂಜಾರಿ, ಮಧು ಸೂದನ್, ನಾರಾಯಣ ಜತ್ತನ್, ಶಶಿಧರ ಎಂ.ಅಮೀನ್, ಉದಯ ಪೂಜಾರಿ, ರಾಘವೇಂದ್ರ ಅಮೀನ್, ಅಶೋಕ್ ಪೂಜಾರಿ, ಸದಾನಂದ ಅಮೀನ್, ರೇಖಾ ಭಾಸ್ಕರ್, ಗಣೇಶ ಕೋಟ್ಯಾನ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಸೂರ್ಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೆಯಾಸ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರದಾನ ಕಾರ್ಯದರ್ಶಿ ಮಾಧವ ಪೂಜಾರಿ ಬನ್ನಂಜೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News