ನ.9ರಿಂದ ಯಕ್ಷ ಪಂಚಮಿ ಕಾರ್ಯಕ್ರಮ

Update: 2021-11-08 14:12 GMT

ಉಡುಪಿ, ನ.8: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇವುಗಳ ಸಹಕಾರದೊಂದಿಗೆ ಹಟ್ಟಿಯಂಗಡಿ ಶ್ರೀಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಎರಡನೇ ವರ್ಷದ ಯಕ್ಷ ಪಂಚಮಿ ಕಾರ್ಯಕ್ರಮವನ್ನು ನ.9ರಿಂದ 13ರವರೆಗೆ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಟ್ಟಿಯಂಗಡಿ ಮೇಳದ ಸಂಚಾಲಕ ರಂಜಿತ್ ಕುಮಾರ್ ಶೆಟ್ಟಿ, 9ರಂದು ಸಂಜೆ 7ಗಂಟೆಗೆ ಕಾರ್ಯಕ್ರಮವನ್ನು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಲಿರುವರು. ಬಳಿಕ ರುಕ್ಮಿಣಿ ಸ್ವಯಂವರ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ನ.10ರಂದು ರಾಮಾಂಜನೇಯ, 11ರಂದು ದೇವಯಾನಿ, 12ರಂದು ವಿರೋಚನ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, 13ರಂದು ಸಂಜೆ 7ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ಅಮರ ಸಿಂಧು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News