ಕಾರ್ಕಳ : ಭಜನಾ ದಿಂಡಿ ಮೆರವಣಿಗೆ

Update: 2021-11-08 15:37 GMT

ಕಾರ್ಕಳ : ಇಲ್ಲಿನ ವೆಂಕಟರಮಣ ಭಜನಾ ಮಂಡಳಿಯ ಸ್ವರ್ಣ ಮಹೋತ್ಸವದ ಅಂಗವಾಗಿ ರವಿವಾರ ಭಜನಾ ದಿಂಡಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

 ಸ್ವರಾಜ್ ಮೈದಾನದಿಂದ ವೆಂಕಟರಮಣ ದೇವಸ್ಥಾನದ ತನಕ ಸಂಭ್ರಮದಿಂದ ಸಾಗಿದ ಮೆರವಣಿಗೆಯಲ್ಲಿ ಭಜನಾ ಮಂಡಳಿಯ ಬಿರುದು ಬಾವಲಿ, ಭಜನಾ ಸಂಕೀರ್ತನಕಾರ ದಿ. ಚಂದ್ರಶೇಖರ ಕಾಮತ್, ಕಾಶೀಮಠದ ಯತಿವರ್ಯ, ತಿರುಪತಿ ವೆಂಕಟರಮಣ ದೇವರ, ಪಂಡರಾಪುರ ವಿಠೋಬ ದೇವರ ಹಾಗೂ ಕಾರ್ಕಳ ವೆಂಕಟರಮಣ ದೇವರ ಟ್ಯಾಬ್ಲೋಗಳು, ಚಂಡೆವಾದನ,  ಬಿಳಿಟೋಪಿ ಧೋತ್ರ ಧರಿಸಿದ ಪುರುಷರು ಹಾಗೂ ಸಮವಸ್ತ್ರ ಧರಿಸಿದ ಮಹಿಳೆಯರ ತಂಡಗಳು ಗಮನ ಸೆಳೆದವು. ಕೈಯಲ್ಲಿ ತಾಳವಿಡಿದು ಭಜನಾ ಸಂಕೀರ್ತನೆ ಗೈಯುತ್ತಾ ಸಾಗಿದ ಮೆರವಣಿಗೆ ಸ್ವರಾಜ್ ಮೈದಾನದಿಂದ ಸಾಲ್ಮರದ ತನಕ ಸಾಗಿ ನಂತರ ದೇವಸ್ಥಾನ ತಲುಪಿತು. ದೇವಸ್ಥಾನದಲ್ಲಿ ಹೊರಗಿನ ಸುತ್ತು ಪ್ರದಕ್ಷಿಣೆ ತೆಗೆದು, ದೇವಾಲಯದ ಒಳ ಸುತ್ತಿನಲ್ಲಿ ಸಂರ್ಕಿತನೆಯೊಂದಿಗೆ ಸಮಾಪ್ತಗೊಂಡಿತು.

ಕಾರ್ಕಳ ಮಾತ್ರವಲ್ಲದೇ ತಾಲ್ಲೂಕಿನ ಹೆಬ್ರಿ, ಅಜೆಕಾರು, ಮುನಿಯಾಲು, ಬೈಲೂರು, ಬೆಳ್ಮಣ್, ಬಜಗೋಳಿ ಹಾಗೂ ಬೆಳುವಾಯಿ ಕಡೆಯಿಂದಲೂ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿದ್ದವು. ಭಜನಾ ಮಂಡಳಿಯ ಸ್ವರ್ಣ ಮಹೋತ್ಸವದ ಅಂಗವಾಗಿ 9ರಿಂದ 15ರ ತನಕ ಅಖಂಡ ಭಜನಾ ಸಪ್ತಾಹವೂ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News