ಮಂಗಳೂರಿನಲ್ಲಿ ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ; 167 ಪ್ರಕರಣ ದಾಖಲು

Update: 2021-11-08 17:29 GMT

ಮಂಗಳೂರು, ನ.8: ಸುಮಾರು ಒಂದೂವರೆ ವರ್ಷದಿಂದ ನಡೆಯದ ಹಾರ್ನ್ ತೆರವು ಕಾರ್ಯಾಚಾರಣೆ ಸೋಮವಾರ ನಗರದ ವಿವಿಧೆಡೆ ನಡೆದಿದೆ. ಹಲವು ಬಸ್‌ಗಳಿಂದ ಕರ್ಕಶ ಹಾರ್ನ್‌ಗೆ ಸಂಬಂಧಿಸಿದ ಉಪಕರಣಗಳನ್ನು ಪೊಲೀಸರು ತೆರವುಗೊಳಿದ್ದು, 167 ಪ್ರಕರಣ ದಾಖಲಿಸಿ, ಒಟ್ಟು 83,500 ರೂ. ದಂಡ ವಿಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ಕಶ ಹಾರ್ನ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು, ಹಿರಿಯ ನಾಗರಿಕರು, ಲಘು ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿತ್ತು. ಹೆಲ್ಮೆಟ್, ನಂಬರ್‌ ಪ್ಲೇಟ್, ಲೈಸೆನ್ಸ್, ಆರ್‌ಸಿ ಎಂದು ಪ್ರತಿ ನಿತ್ಯ ದಂಡ ಸಂಗ್ರಹಿಸುವ ಪೊಲೀಸರು ಕರ್ಕಶ ಹಾರ್ನ್ ಕುರಿತಂತೆ ಮೌನವಾಗಿದ್ದರು. ಕಾರ್ಯಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಿಯಮಿತವಾಗಿ ನಡೆಯಬೇಕು. ಇಲ್ಲವಾದಲ್ಲಿ ಮತ್ತೆ ಹಾರ್ನ್ ಅಳವಡಿಸುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News