ಮಂಗಳೂರು; ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ: ಯುವಕ ಸೆರೆ

Update: 2021-11-09 16:19 GMT

ಮಂಗಳೂರು : ಮಹಿಳೆಯೋರ್ವರಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಆರೋಪದಲ್ಲಿ ಯುವಕನನ್ನು ಮಂಗಳೂರು ಸೈಬರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮೂಲತ ಚಿಕ್ಕಮಗಳೂರಿನವನಾಗಿರುವ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸಂತೋಷ್ ಎಂದು ಗುರುತಿಸಲಾಗಿದೆ.

ಆರೋಪಿ ಸಂತೋಷ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಇದು ಆಕೆಯ ಮನೆಯವರಿಗೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಯುವತಿಯನ್ನು ಆಕೆಯ ಚಿಕ್ಕಮ್ಮ ಮಂಗಳೂರಿಗೆ ಕರೆ ತಂದಿದ್ದರು. ಇದು ಆರೋಪಿಗೆ ಗೊತ್ತಾಗಿ ಕೋಪದಿಂದ ಯುವತಿಯ ಚಿಕ್ಕಮ್ಮನಿಗೆ ಅಶ್ಲೀಲ ಸಂದೇಶ ಕಳುಹಿಸಿ ಮಾಸಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ದೂರು ನೀಡಲಾಗಿತ್ತು. ಈ ಆಧಾರದಲ್ಲಿ ಸಂತೋಷ್‌ನನ್ನು ಮಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News