ಕಾರ್ಕಳ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪಹರಣ ಪ್ರಕರಣದ ಆರೋಪಿಗಳ ಬಂಧನ

Update: 2021-11-13 13:15 GMT
ಬಂಧಿತ ಆರೋಪಿಗಳು

ಕಾರ್ಕಳ:14 ವರ್ಷಗಳ ಹಿಂದೆ ವ್ಯಕ್ತಿಯ ಅಪಹರಣ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೋಲೀಸರು ಹೊಳೆನರಸೀಪುರದಲ್ಲಿ ಬಂದಿಸಿದ್ದಾರೆ.

2007ರ ಅ.14 ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಆರೋಪಿಗಳಾದ ಯೋಗಿಶ, ಮಂಜುನಾಥ್, ವಸಂತ ಕಾರ್ಕಳ ಕುಕ್ಕುಂದೂರು ಗ್ರಾಮದ ವೆಂಕಟೇಶ್ ಎಂಬವರನ್ನು ಅಪಹರಿಸಿಕೊಂಡು ಹೋಗಿ, ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿದ್ದರು. ಈ ಬಗ್ಗೆ  ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಯೋಗೀಶನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಡಿಸಿದ್ದರು. ಉಳಿದ ಆರೋಪಿಗಳಾದ ಮಂಜುನಾಥ ಮತ್ತು ವಸಂತ ಪ್ರಕರಣ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದರು. ನ್ಯಾಯಾಲಯವು ಆರೋಪಿಗಳ ಬಂಧನಕ್ಕೆ ಎಲ್ ಪಿ ಸಿ ವಾರಂಟ್ ಹೊರಡಿಸಿತ್ತು.

ಕಾರ್ಕಳ ಉಪ-ವಿಭಾಗದ ಡಿ ವೈ ಎಸ್ ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ರವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿ ಎಸ್ ಐ ಮಧು ಬಿ ಇ ರವರ ಆದೇಶದಂತೆ ಠಾಣಾ ಎ ಎಸ್ ಐ ರಾಜೇಶ್ ಪಿ, ಪ್ರೋಬೇಶನರಿ ಪಿ ಎಸ್ ಐ ಮಹೇಶ್ ಕಂಬಿ, ಪಿ ಸಿ ಘನಶ್ಯಾಮ್ ರವರು ಆರೋಪಿಗಳು ಹೊಳೆನರಸೀಪುರದಲ್ಲಿವರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News