ನ.15: ಪಿಪಿಸಿಯಲ್ಲಿ ವಿಜ್ಞಾನ ಪ್ರಜ್ಞಾ ಮಾಲಿಕೆ ವೆಬಿನಾರ್

Update: 2021-11-13 16:08 GMT

ಉಡುಪಿ, ನ.13: ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ‘ವಿಜ್ಞಾನ ಪ್ರಜ್ಞಾ ಮಾಲಿಕೆ - ಜನಸಾಮಾನ್ಯರಿಗಾಗಿ ವಿಜ್ಞಾನ’ ಎಂಬ ಶೀರ್ಷಿಕೆಯಡಿಯಲ್ಲಿ ಐದು ದಿನಗಳ ವಿಜ್ಞಾನದ ವೆಬಿನಾರ್ ಕಾರ್ಯಕ್ರಮವನ್ನು ಗ್ರಾಮೀಣ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಜನಸಾಮಾನ್ಯರಿಾಗಿ ಹಮ್ಮಿಕೊಂಡಿದೆ.

ನ.15ರಿಂದ 19ರವರೆಗೆ ಪ್ರತಿದಿನ ಅಪರಾಹ್ನ 2:45ರಿಂದ 4:00 ಗಂಟೆ ಯವರೆಗೆ ನಡೆಯುವ ಈ ವೆಬಿನಾರ್ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದ ಖ್ಯಾತ ಬರಹಗಾರರು, ಸಂಶೋಧಕರು ಹಾಗೂ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಮೂಲ ಹಾಗೂ ಅನ್ವಯಿಕ ವಿಜ್ಞಾನ ವಿಷಯಗಳಲ್ಲಿ ಸಂವಹನ ನಡೆಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News