​ಬಸ್ ಟಿಕೆಟ್ ದರ ಇಳಿಕೆ ಅಸಾಧ್ಯ: ಕುಯಿಲಾಡಿ

Update: 2021-11-15 16:02 GMT

ಉಡುಪಿ, ನ.15: ಡಿಸೇಲ್ ಬೆಲೆ 75ರೂ.ಗೆ ಇಳಿಯದೆ ಖಾಸಗಿ ಬಸ್‌ಗಳ ಟಿಕೆಟ್ ದರ ಇಳಿಸಲು ಸಾಧ್ಯವಿಲ್ಲ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಈಗ ಚಾಲ್ತಿಯಲ್ಲಿರುವ ಬಸ್ ಪ್ರಯಾಣದರವು ಡಿಸೇಲ್ ಬೆಲೆ 85ರೂ.ಗೆ ಅನುಗುಣವಾಗಿರುವುದು. ನಾವು ಬಸ್ ಪ್ರಯಾಣದರ ಹೆಚ್ಚಿಸಲು ಕೊರೋನ ಕೂಡ ಕಾರಣವಾಗಿದೆ. ಕೊರೋನದಿಂದಾಗಿ ಜನ ಬಸ್ಸಿನಲ್ಲಿ ಬರುವುದು ಕಡಿಮೆ ಮಾಡಿದ್ದರು. ಇದರಿಂದ ಬಸ್ ಮಾಲಕರು ನಷ್ಟ ಅನುಭವಿಸಿದ್ದರು. ಡಿಸೇಲ್ ಬೆಲೆ 75 ರೂ. ಅಸುಪಾಸು ಬಂದರೆ ನಾವು ಖಂಡಿತ ಪ್ರಯಾಣದರ ಇಳಿಕೆ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News