ಉಪ್ಪಿನಂಗಡಿ: ವ್ಯಾನಿಟಿ ಬ್ಯಾಗ್‌ನಲ್ಲಿದ್ದ 18 ಪವನ್ ಚಿನ್ನಾಭರಣ ಕಾಣೆ

Update: 2021-11-15 16:47 GMT

ಉಪ್ಪಿನಂಗಡಿ, ನ.15: ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪತ್ನಿ ಐಸಮ್ಮ ಎಂಬವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 18 ಪವನ್ ತೂಕದ ಚಿನ್ನಾಭರಣ ಕಾಣೆಯಾದ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.

ನ.7ರಂದು ಬೆಳಗ್ಗೆ ಐಸಮ್ಮ ತನ್ನ ಮಕ್ಕಳು ಮತ್ತು ತಂದೆಯ ಜೊತೆಗೂಡಿ ಪೆರ್ಲಾಪುವಿನಿಂದ ಕಡೇಶಿವಾಲ್ಯ-ಅಮೈ-ಉಪ್ಪಿನಂಗಡಿ ಮಾರ್ಗವಾಗಿ ಎರಡು ರಿಕ್ಷಾ ಮತ್ತು ಒಂದು ಸರಕಾರಿ ಬಸ್ಸಿನಲ್ಲಿ ಉಜಿರೆ ಕಡೆಗೆ ಪ್ರಯಾಣಿಸಿದ್ದರು. ಈ ವೇಳೆ ಉಜಿರೆಯಲ್ಲಿ ನಡೆಯುವ ಮದುವೆ ಸಮಾರಂಭವೊಂದದಲ್ಲಿ ಧರಿಸಲೆಂದು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಲಾಗಿದ್ದ 18 ಪವನ್ ತೂಕದ ಚಿನ್ನಾಭರಣ ಕಾಣೆಯಾಗಿದೆ ಎಂದು ಐಸಮ್ಮರ ಪತಿ ಅಬ್ದುಲ್ ಲತೀಫ್ ದೂರು ನೀಡಿದ್ದಾರೆ.

ವ್ಯಾನಿಟಿ ಬ್ಯಾಗ್‌ನಲ್ಲಿ 1 ಸರ, 5 ಉಂಗುರ, 2 ಬಳೆ, 2 ಬ್ರೇಸ್‌ಲೆಟ್, 1 ಪೆಂಡೆಂಟ್ ಸಹಿತ 18 ಪವನ್ ತೂಕದ ಚಿನ್ನಾಭರಣವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಚಿನ್ನಾಭರಣ ಸಿಕ್ಕಿದವರು ಮೊ.ಸಂ: 9901725660/8971449546ಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News