ದೇಶಭಕ್ತಿ, ರಾಷ್ಟ್ರ ನಿರ್ಮಾಣದಲ್ಲಿ ಯುವಜನರು: ಭಾಷಣ ಸ್ಟರ್ಧೆಗೆ ಆಹ್ವಾನ

Update: 2021-11-15 17:03 GMT

ಮಂಗಳೂರು, ನ.15: ಗಣರಾಜ್ಯೋತ್ಸವದ ಪ್ರಯುಕ್ತ ಹಾಗೂ ಸಂವಿಧಾನ ದಿವಸ ಆಚರಿಸಲು ‘‘ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು’’ ಕುರಿತ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಭಾಷಣ ಸ್ಪರ್ಧೆಯನ್ನು ನೆಹರೂ ಯುವ ಕೇಂದ್ರವು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಿದೆ.

ಮಂಗಳೂರಿನ ನೆಹರು ಯುವ ಕೇಂದ್ರವು ತಾಲೂಕು ಹಾಗೂ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನಗಳನ್ನು ಕೇಂದ್ರ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡಲಿದೆ. ತಾಲೂಕು ಮಟ್ಟದ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಜಿಲ್ಲಾ ಮಟ್ಟದ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ- 5,000 ರೂ.ಗಳು, ದ್ವಿತೀಯ ಬಹುಮಾನ-2,000 ರೂ.ಗಳು ಹಾಗೂ ತೃತೀಯ ಬಹುಮಾನ 1,000 ರೂ.ಗಳು ರಾಜ್ಯಮಟ್ಟದ ಪ್ರಥಮ ಬಹುಮಾನ- 25,000 ರೂ.ಗಳು, ದ್ವಿತೀಯ ಬಹುಮಾನ-10,000 ರೂ.ಗಳು ಹಾಗೂ ತೃತೀಯ ಬಹುಮಾನ 5,000 ರೂ.ಗಳು., ರಾಷ್ಟ್ರ ಮಟ್ಟದ ಪ್ರಥಮ ಬಹುಮಾನ- 2 ಲಕ್ಷ ರೂ.ಗಳು, ದ್ವಿತೀಯ ಬಹುಮಾನ-1 ಲಕ್ಷ ರೂ.ಗಳು ಹಾಗೂ ತೃತೀಯ ಬಹುಮಾನ- 50 ಸಾವಿರ ರೂಪಾಯಿಗಳು. ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ಭಾಷಣ ಮಾಡಲು ಅವಕಾಶವಿದ್ದು, 9-10 ನಿಮಿಷಗಳ ಭಾಷಣಕ್ಕೆ ಅವಕಾಶ ನೀಡಲಾಗಿದೆ.

ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿಭಾವಂತ ಅಭ್ಯರ್ಥಿಗಳು 18-29 ವರ್ಷದೊಳಗಿರಬೇಕು ಹಾಗೂ ಕಡ್ಡಾಯವಾಗಿ ದ.ಕ. ಜಿಲ್ಲೆಯ ನಿವಾಸಿಗಳಾಗಿರಬೇಕು. ಆಯಾ ತಾಲೂಕಿನ ಆಸಕ್ತರು ಯಾವುದೇ ವರ್ಗದ, ಉದ್ಯೋಗ ಅಥವಾ ಉದ್ಯೋಗದಲ್ಲಿರದ ಯುವಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಳುಗಳು ತಮ್ಮ ಪಾಸ್ ಪೋರ್ಟ್ ಸೈಝ್ ಸಪೋಟೊ, ಆಧಾರ್ ಕಾರ್ಡ್( ಕಡ್ಡಾಯವಾಗಿ) ಪ್ರತಿ, ಪ್ಯಾನ್ ಕಾರ್ಡ್/ ಶಾಲಾ ಕಾಲೇಜಿನಿಂದ ಅಥವಾ ಆಫೀಸ್/ಸಂಸ್ಥೆಗಳಿಂದ ನೀಡಲಾದ ಅಧಿಕೃತ ಫೋಟೊ ಇರುವ ಗುರುತಿನ ಚೀಟಿಯನ್ನು, ವಯೋಮಿತಿಯ ತಪಾಸಣೆಗಾಗಿ ಅಗತ್ಯವಾಗಿ ತರಬೇಕು.

ಪಿಯು/ಪ್ರಥಮ ದರ್ಜೆ ಕಾಲೇಜು ಅಥವಾ ವಿದ್ಯಾ ಸಂಸ್ಥೆಗಳು ಮೊದಲು ತಮ್ಮ ತಮ್ಮ ಕಾಲೇಜುಗಳಲ್ಲಿ ಮೆಲ್ಕಂಡ ವಿಷಯದಲ್ಲಿ ಭಾಷಣ ಸ್ಪರ್ಧೆ ನಡೆಸಿ ವಿಜೇತರಾದ ಮೊದಲ 3 ಅಭ್ಯರ್ಥಿಗಳನ್ನು ತಾಲೂಕು ಮಟ್ಟಕ್ಕೆ ಆಯ್ಕೆಗೊಳಿಸಬೇಕು. ಆಯಾ ತಾಲೂಕಿನಿಂದ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ಈ ಕೆಳಕಂಡ ಕೇಂದ್ರಗಳಲ್ಲಿ ನಡೆಯುವುದು
ನ.19ರಂದು 11:30ಕ್ಕೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್‌ನ ಡಿಪಾರ್ಟ್‌ಮೆಂಟ್ ಆಫ್ ಫಿಸಿಕ್ಸ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ.ಚಂದ್ರಶೇಖರ್ ಮೊ.ಸಂ: 9743824251, ಮಂಗಳೂರು ನೆಹರು ಯುವಕೇಂದ್ರದ ತಾಲೂಕು ಪ್ರತಿನಿಧಿ ಗೌತಮ್ ರಾಜ್ ಕರಂಬಾರು ಮೊ.ಸಂ: 8105138177, ನ.19ರಂದು ಬೆಳಗ್ಗೆ 10ಕ್ಕೆ ಸುಳ್ಯ ನೆಹರು ಮೆಮೊರಿಯಲ್ ಕಾಲೇಜ್‌ನ ಯೂತ್ ರೆಡ್‌ಕ್ರಾಸ್ ವಿಂಡ್ ಪ್ರೋಗ್ರಾಂ ಆಫೀಸರ್ ಡಾ. ಅನುರಾಧ ಕುರುಂಜಿ ಮೊ.ಸಂ: 9448205970 ಹಾಗೂ ತಾಲೂಕು ಪ್ರತಿನಿಧಿ ಪ್ರತಿಭಾ ಮೊ.ಸಂ:9845229438 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ನಗರದ ನೆಹರೂ ಯುವಕೇಂದ್ರ ಕಚೇರಿ ದೂ.ಸಂ: 0824-2422264 ಸಂಪರ್ಕಿಸುವಂತೆ ನೆಹರು ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News