ಮಂಗಳೂರು: ಖಾಸಗಿ ಬಸ್ ಸಿಬ್ಬಂದಿಗಳ ವರ್ತನೆಯ ವಿರುದ್ಧ ಕ್ರಮಕ್ಕೆ ಸಿಎಫ್‌ಐ ಮನವಿ

Update: 2021-11-17 16:07 GMT

ಮಂಗಳೂರು, ನ.17: ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಕಡೆ ಖಾಸಗಿ ಬಸ್ಸುಗಳ ಚಾಲಕರು ಅಜಾಗರೂಕತೆಯಿಂದ ಚಲಾಯಿಸು ವುದರಿಂದ ಮತ್ತು ಸಿಬ್ಬಂದಿಗಳ ವರ್ತನೆಯಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಾರಿಗೆ ಇಲಾಖಾಧಿಕಾರಿಗೆ ಮನವಿ ಸಲ್ಲಿಸಿದೆ.

ಬಸ್ ಸಿಬ್ಬಂದಿಗಳು ವಿದ್ಯಾರ್ಥಿಗಳಿಂದ ಹಣವನ್ನು ಲೂಟಿ ಮಾಡುವುದಲ್ಲದೆ. ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರನ್ನು ಮಿತಿಗಿಂತ ಅಧಿಕ ಮಂದಿ ಯನ್ನು ಬಸ್ಸಿನಲ್ಲಿ ತುಂಬಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ರಸ್ತೆ ಸಾರಿಗೆ ಇಲಾಖೆಯು ಶೀಘ್ರವಾಗಿ ಈ ಬಗ್ಗೆ ಗಮನ ಹರಿಸಬೇಕೆಂದು ಸಿಎಫ್‌ಐ ಮಂಗಳೂರು ನಗರ ಸಮಿತಿಯು ಒತ್ತಾಯಿಸಿದೆ.

ಸಿಎಫ್‌ಐ ಮಂಗಳೂರು ನಗರ ಉಪಾಧ್ಯಕ್ಷ ಮುನೀರ್ ಬಜಾಲ್, ಜಿಲ್ಲಾ ಜೊತೆ ಕಾರ್ಯದರ್ಶಿ ಶಾಹಿಕ್ ಮಂಗಳೂರು ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News