ರಸ್ತೆ ಅಪಘಾತ: ಗಾಯಾಳು ಯುವಕ ಮೃತ್ಯು

Update: 2021-11-18 14:48 GMT

ಪಡುಬಿದ್ರಿ: ರಸ್ತೆಗೆ ಅಡ್ಡವಾಗಿ ಬಂದ ಹೋರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟ ಘಟನೆ ನಡೆದಿದೆ.

ಬೆಳಪುವಿನ 21 ವರ್ಷದ ಫರಾನ್ ಆಲಿ ಮೃತ ಬೈಕ್ ಸವಾರ. ಕಳೆದ ಶುಕ್ರವಾರ ತಡ ರಾತ್ರಿ ಪುಂಚಲಕಾಡಿನಿಂದ ಬೆಳಪುಗೆ ಬರುವ ವೇಳೆ ವಿನಯ ನಬೆಳಪುವಿನ ಬದ್ರಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಫರಾನ್ ಆಲಿಯ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಫರಾನ್ ಆಲಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ  ದಾಖಲು ಮಾಡಿದ್ದರು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಫರಾನ್ ಆಲಿ ದುಬೈಯಲ್ಲಿ ಉದ್ಯೋಗದಲ್ಲಿದ್ದು, ನಾಲ್ಕು ತಿಂಗಳ ಹಿಂದೆ ರಜೆಯಲ್ಲಿ ಮರಳಿದ್ದರು. ಮುಂದಿನ ತಿಂಗಳು ದುಬೈಗೆ ತೆರಳಲಿದ್ದು, ಬೆಳಪುವಿನ ಬೆಸ್ಟ್ ಬೆಳಪ ಕ್ರಿಕೆಟ್ ತಂಡದ ಸದಸ್ಯರಾಗಿದ್ದು, ಉತ್ತಮ ಆಟಗಾರನಾಗಿದ್ದರು.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News