ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Update: 2021-11-18 16:02 GMT

ಉಡುಪಿ, ನ.18: ಪ್ರಸಕ್ತ ಸಾಲಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್‌ರು ಮತ್ತು ಪಾರ್ಸಿ ಜನಾಂಗದವರಿಂದ ಶ್ರಮಶಕ್ತಿ, ಸಣ್ಣ ಸಾಲ (ಮೈಕ್ರೋ ಕ್ರೆಡಿಟ್), ಮಹಿಳೆಯರಿಗೆ ಮೈಕ್ರೋ ಸಾಲ (ವೈಯಕ್ತಿಕ), ಗಂಗಾಕಲ್ಯಾಣ ಹಾಗೂ ಟ್ಯಾಕ್ಸಿ/ಗೂಡ್ಸ್/ಆಟೋರಿಕ್ಷಾ ವಾಹನ ಖರೀದಿ ಸಹಾಯಧನ ಯೋಜನೆಗಳಿಗೆ 80:10:10 ಅನುಪಾತದಲ್ಲಿ ಅಂದರೆ ಶೇ.80ರಷ್ಟು ಮುಸ್ಲಿಂ, ಶೇ.10ರಷ್ಟು ಕ್ರೈಸ್ತರು ಹಾಗೂ ಶೇ. 10ರಷ್ಟು ಇತರರಿಗೆ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿ.15 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ -https://kmdconline.karnataka.gov.in-ಅಥವಾ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ವೌಲಾನಾ ಆಝಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:0820-2574990 ಅನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸಾ್ಥಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News