ಪುತ್ತೂರು ರೇಂಜ್ ಮಟ್ಟದ ಇಸ್ಲಾಮಿಕ್ ಸಾಹಿತ್ಯ ಕಲಾ ಸ್ಪರ್ಧೆ 'ಮುಸಾಬಕ-2021' ಸ್ವಾಗತ ಸಮಿತಿ ರಚನೆ

Update: 2021-11-19 10:34 GMT

ಪುತ್ತೂರು, ನ.19: 'ಸಮಸ್ತ'ದ ಅಧೀನದ ಮದ್ರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ನಡೆಯುವ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ 'ಮುಸಾಬಕ- 2021' ದ ಪುತ್ತೂರು ರೇಂಜ್ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

 ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ನಡೆದ  ಸ್ವಾಗತ ಸಮಿತಿ ರಚನಾ ಸಭೆಯ ಅಧ್ಯಕ್ಷತೆಯನ್ನು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ರಫೀಕ್ ಹಾಜಿ ನೇರಳಕಟ್ಟೆ  ವಹಿಸಿದ್ದರು.

ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ ಮುಸಾಬಕದ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ರೇಂಜ್ ಮಟ್ಟದ 'ಮುಸಾಬಕ' ಡಿಸೆಂಬರ್ ನಲ್ಲಿ ನಡಯಲಿದ್ದು ಇದರ ಪೂರ್ವಸಿದ್ಧತೆಗಾಗಿ ರಚಿಸಲಾದ ಸ್ವಾಗತ ಸಮಿತಿಗೆ ಈ ಕೆಳಗಿನವರನ್ನು ಆರಿಸಲಾಯಿತು.

 ಅಧ್ಯಕ್ಷರಾಗಿ ಆರ್.ಪಿ.ಅಬ್ದುರ್ರಝಾಕ್ ಪಡೀಲ್, ಕನ್ವೀನರ್ ಆಗಿ ಶಾಫಿ ಮುಸ್ಲಿಯಾರ್ ಕಲ್ಲೇಗ, ಕೋಶಾಧಿಕಾರಿಯಾಗಿ ಬಾತಿಷ್ ವಳತ್ತಡ್ಕ, ಉಪಾಧ್ಯಕ್ಷರಾಗಿ ನೌಶಾದ್ ಹಾಜಿ ಬೊಳುವಾರು, ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ, ಇಸ್ಮಾಯೀಲ್ ಸಾಲ್ಮರ,ವೈಸ್ ಕನ್ವೀನರ್ ಆಗಿ ಮುಸ್ತಫ ಫೈಝಿ ಪರ್ಲಡ್ಕ, ಎ.ಎಸ್.ಕೌಸರಿ ವಳತ್ತಡ್ಕ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸೈನಾರ್ ಬನಾರಿ, ಸಂಶುದ್ದೀನ್ ಪಡೀಲ್, ಸೂಫಿ ಬಪ್ಪಳಿಗೆ, ಎಂ.ಎಸ್.ಅಬ್ದುಲ್ ಹಮೀದ್ ಪುಣಚ, ಅಬ್ದುಲ್ ಮಜೀದ್ ದಾರಿಮಿ ಮಿತ್ತೂರು, ಸುಲೈಮಾನ್ ದಾರಿಮಿ ಮಂಜ, ಸಂಶುದ್ದೀನ್ ಹನೀಫಿ ಮರ್ಧಾಳ, ರಫೀಕ್ ಹಾಜಿ ನೇರಳಕಟ್ಟೆ, ಇಬ್ರಾಹೀಂ ಕಡವ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News