ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್: ವೇಳಾಪಟ್ಟಿ ಪ್ರಕಟ

Update: 2021-11-20 13:50 GMT

ಉಡುಪಿ, ನ.20: 2019-21ನೇ ಸಾಲಿನಲ್ಲಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಯನ್ನು ಶೇ.7ಕ್ಕೆ ಮಿತಿಗೊಳಿಸಿ ಗಣಕೀಕೃತ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುವ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದೆ.

ವರ್ಗಾವಣೆ ವೇಳಾಪಟ್ಟಿಯಂತೆ ಜಿಲ್ಲೆಯೊಳಗೆ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ, 1ರಿಂದ 100ರವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ನ.24ರಂದು ಮತ್ತು 101ರಿಂದ 300ರ ವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ನ.25ರಂದು ಕೌನ್ಸಿಲಿಂಗ್ ನಡೆಯಲಿದೆ.

ಇನ್ನು 301ರಿಂದ 425ರವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ, 1ರಿಂದ 20ರವರೆಗಿನ ಕ್ರಮಾಂಕಗಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಮತ್ತು 01ರಿಂದ 28 ರವರೆಗಿನ ಕ್ರಮಾಂಕಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ನ.26ರಂದು, 1ರಿಂದ 23 ರವರೆಗಿನ ಕ್ರಮಾಂಕಗಳ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಹಾಗೂ 1ರಿಂದ 6ರವರೆಗಿನ ಕ್ರಮಾಂಕಗಳ ವಿಶೇಷ ಶಿಕ್ಷಕರಿಗೆ ನ.27 ರಂದು ಕೌನ್ಸಿಲಿಂಗ್‌ನ್ನು ನಡೆಸಲಾಗುವುದು.

1ರಿಂದ100ರವರೆಗಿನ ಕ್ರಮಾಂಕಗಳ ಪ್ರೌಢಶಾಲಾ ಸಹಶಿಕ್ಷಕರಿಗೆ ನ.29 ರಂದು ಹಾಗೂ 101ರಿಂದ 269ರವರೆಗಿನ ಕ್ರಮಾಂಕಗಳ ಪ್ರೌಢಶಾಲಾ ಸಹ ಶಿಕ್ಷಕರಿಗೆ ನ.30ರಂದು ಬೆಳಗ್ಗೆ 10ರಿಂದ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ.

ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಎಲ್ಲಾ ಶಿಕ್ಷಕರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಕೌನ್ಸಿಲಿಂಗ್‌ಗೆ ಹಾಜರಾಗಬೇಕು. ಹಾಗೂ ಆದ್ಯತೆ ಮೇರೆಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳು ಸಂಬಂಧಿಸಿದ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News